ದುಬೈ: ಏಷ್ಯಾಕಪ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಟೂರ್ನಿಯ ಸೂಪರ್-4 ಹಂತಕ್ಕೆ ತೇರ್ಗಡೆಯಾಗಿದೆ. ಬುಧವಾರ ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದುರ್ಬಲ ಹಾಂಕಾಂಗ್ ತಂಡವನ್ನು ಭಾರತ, 40 ರನ್‌ಗಳ ಅಂತರದಲ್ಲಿ ಮಣಸಿತು.
ಟೀಮ್ ಇಂಡಿಯಾ ನೀಡಿದ್ದ 193 ರನ್‌ಗಳ ಗುರಿ ಬೆನ್ನಟ್ಟುವ ವೇಳೆ ಯಾವುದೇ ಹೋರಾಟ ಪ್ರದರ್ಶಿಸದ ಹಾಂಕಾಂಗ್, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 40 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಮೂರನೇ ಕ್ರಮಾಂಕದಲ್ಲಿ ಬಂದ ಬಾಬರ್ ಹಯಾತ್ 41 ರನ್‌ಗಳಿಸಿದ್ದೇ ಸರ್ವಾಧಿಕ ಸ್ಕೋರ್ ಎನಿಸಿಕೊಂಡಿತು. ಉಳಿದಂತೆ ಕಿಂಚಿತ್ ಶಾ 30 ರನ್, ಹಾಗೂ ಝೀಶನ್ ಅಲಿ 26 ರನ್‌ಗಳಿಸಿ ಅಜೇಯರಾಗುಳಿದರು.
ಭಾರತದ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ರವೀಂದ್ರ ಜಡೇಜಾ ಹಾಗೂ ಆವೇಶ್ ಖಾನ್ ತಲಾ 1 ವಿಕೆಟ್ ಪಡೆದರು.