NCHRCO ನೂತನ ರಾಜ್ಯಾಧ್ಯಕ್ಷರಾಗಿ ಅಡ್ವೊಕೇಟ್ ಎಸ್. ಬಾಲನ್ ಆಯ್ಕೆ

Prasthutha|

ಬೆಂಗಳೂರು : ನ್ಯಾಷನಲ್ ಕಾನ್ಫಡೆರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಝೇಶನ್ಸ್ (ಎನ್‌ಸಿಎಚ್‌ಆರ್‌ಓ) ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಎಸ್. ಬಾಲನ್ ಬೆಂಗಳೂರು ಆಯ್ಕೆಯಾಗಿದ್ದಾರೆ.

- Advertisement -

ಜನವರಿ 22ರಂದು ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್‌ ನಲ್ಲಿ 2021-22ರ ಅವಧಿಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ಉಮರ್ ಫಾರೂಕ್ ಮಂಗಳೂರು, ಉಪಾಧ್ಯಕ್ಷರಾಗಿ ಮುಹಮ್ಮದ್ ಕಕ್ಕಿಂಜೆ ಮಂಗಳೂರು, ಕಾರ್ಯದರ್ಶಿಯಾಗಿ ಗಣೇಶ್ ಜಿ. ಬೆಂಗಳೂರು ಹಾಗೂ ಖಜಾಂಚಿಯಾಗಿ ಅಡ್ವೊಕೇಟ್ ಅನೀಸ್ ದಾವಣಗೆರೆ ಆಯ್ಕೆಯಾದರು.

- Advertisement -

ಸಮಿತಿ ಸದಸ್ಯರಾಗಿ ಡಾ. ಪದ್ಮಶ್ರೀ ಮೈಸೂರು, ಮಲ್ಲೇಶ್ ರಾಯಚೂರು, ಸಾಮಾಜಿಕ ಕಾರ್ಯಕರ್ತ ಜ್ಞಾನಮೂರ್ತಿ ಬೆಂಗಳೂರು, ಶುಹೈಬ್ ಬೆಂಗಳೂರು, ಅಡ್ವೊಕೇಟ್ ಸಾಜಿದಾ ಬೆಂಗಳೂರು, ಅಡ್ವೊಕೇಟ್ ಚಾಂದ್ ಪಾಷಾ ರಾಮನಗರ, ಅಬ್ದುಲ್ ರಹೀಮ್ ಬೆಂಗಳೂರು, ಅಡ್ವೊಕೇಟ್ ಅಬೂಬಕರ್ ಮಡಿಕೇರಿ, ಶರೀಫ್ ಕೊಡಾಜೆ ಮಂಗಳೂರು, ಅಡ್ವೊಕೇಟ್ ಮುಜಾಫರ್ ಬೆಂಗಳೂರು, ಅಡ್ವೊಕೇಟ್ ಗೌತಮ್ ಬೆಂಗಳೂರು, ಅಡ್ವೊಕೇಟ್ ಸೀಮಾ ಚಿಕ್ಕಮಗಳೂರು, ಅಡ್ವೊಕೇಟ್ ಬಸವ ಪ್ರಸಾದ್ ಬೀದರ್, ರಿಯಾಝ್ ಮಂಗಳೂರು, ಅಡ್ವೊಕೇಟ್ ರಂಗಸ್ವಾಮಿ ಮೈಸೂರು, ಉಮ್ಮರ್ ಫಾರೂಕ್ ಚನ್ನರಾಯಪಟ್ಟಣ ಆಯ್ಕೆಯಾದರು.

ನ್ಯಾಷನಲ್ ಕಾನ್ಫಡೆರೇಶನ್ ಆಫ್ ಹ್ಯೂಮನ್ ರೈಟ್ ಆರ್ಗನೈಝೇಶನ್ಸ್ (NCHRO) ನ ರಾಷ್ಟ್ರೀಯ ಸಮಿತಿ ಸದಸ್ಯ ಅನ್ಸಾರ್ ಇಂದೋರಿಯವರು ‘‘ರಾಜಕೀಯ ಖೈದಿಗಳು’’ ಎಂಬ ವಿಷಯದಲ್ಲಿ ಮಾತನಾಡಿದರು.

Join Whatsapp