Home ಟಾಪ್ ಸುದ್ದಿಗಳು ಪಕ್ಷಪಾತಿ ಧೋರಣೆ| ದೆಹಲಿ ಹಿಂಸಾಚಾರದ ಕಾರ್ಯಕ್ರಮಗಳನ್ನು ತೆಗೆದು ಹಾಕುವಂತೆ ‘ಟೈಮ್ಸ್ ನೌ’ ಗೆ NBSA ಆದೇಶ

ಪಕ್ಷಪಾತಿ ಧೋರಣೆ| ದೆಹಲಿ ಹಿಂಸಾಚಾರದ ಕಾರ್ಯಕ್ರಮಗಳನ್ನು ತೆಗೆದು ಹಾಕುವಂತೆ ‘ಟೈಮ್ಸ್ ನೌ’ ಗೆ NBSA ಆದೇಶ

ಹೊಸದಿಲ್ಲಿ: ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತವಾಗಿದ್ದು, ಪ್ರಸಾರ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ನ್ಯೂಸ್ ಬ್ರಾಡ್ ಕಾಸ್ಟಿಂಗ್ ಎಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ(NBSA)ಯು ಟೈಮ್ಸ್ ನೌ ವಾಹಿನಿಯ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಎರಡು ಪ್ರೈಮ್ ಟೈಮ್ ಚರ್ಚಾ ಕಾರ್ಯಕ್ರಮಗಳನ್ನು ತೆಗೆದು ಹಾಕುವಂತೆ ಆದೇಶಿಸಿದೆ.

ವಾಹಿನಿಯ ಎರಡು ಪ್ರೈಮ್ ಟೈಮ್ ಶೋಗಳಾದ “ಶಾಕಿಂಗ್ ಸೀಕ್ರೆಟ್ ಅಡ್ಮಿಶನ್ ಔಟ್ ಇನ್ ಉಮರ್ಸ್ ಅರೆಸ್ಟ್, ಡಸ್ ಲೀವ್ ಲಾಬಿ ನೋ ದಿ ಟ್ರುತ್ ಡೆಲ್ಲಿ ರಯಟ್ಸ್ ಕೀ ವಿಟ್ನೆಸ್ ಇಂಟಿಮಿಡೇಟೆಡ್, ಥ್ರೆಟ್ ಲಿಂಕ್ಡ್ ಟು ಕಿಂಗ್ಪಿನ್?” ಮತ್ತು “ಡೆಲ್ಲಿ ರಯಟ್ಸ್: ಪ್ಲಾಟ್ ಟು ಕಿಲ್ ಕಾಪ್ಸ್ ಎಂಡ್ ಕಾಫಿರ್ಸ್ ಎಕ್ಸಪೋಸ್ಡ್: ಪೀಸ್ಫುಲ್ ಪ್ರೊಟೆಸ್ಟ್ ಎ ಫೆಕೇಡ್?” ಎಂಬ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ಪದ್ಮಾ ಜೋಶಿ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದರು.

Join Whatsapp
Exit mobile version