ಹುಡುಕಿ ಕೊಟ್ಟರೆ 97 ಲಕ್ಷ ಬಹುಮಾನ ಘೋಷಿಸಿದ್ದ ಸರ್ಕಾರ
ನವದೆಹಲಿ: 2004ರಲ್ಲಿ ಆಂಧ್ರಪ್ರದೇಶ ಸರ್ಕಾರದ ಜೊತೆ ಶಾಂತಿ ಮಾತುಕತೆಗೆ ಕಾರಣಕರ್ತನಾಗಿದ್ದ ನಿಷೇಧಿತ ಮಾವೋವಾದಿ ಸಂಘಟನೆಯ ಉನ್ನತ ಮುಖಂಡ ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ರಾಮಕೃಷ್ಣ ಅನಾರೋಗ್ಯದಿಂದ ಛತ್ತೀಸ್ ಗಢದಲ್ಲಿ ನಿಧನರಾಗಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಅವರಿಗೆ 58 ವರ್ಷ ವಯಸ್ಸಾಗಿತ್ತು.
ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು ಹಾಗೂ ಮಾವೋವಾದಿಗಳು ಮತ್ತು ಆಂಧ್ರ ಮತ್ತು ಒಡಿಶಾ ಗಡಿ ನಿಷೇಧಿತ ಸಂಘಟನೆಯ ವಿಶೇಷ ವಲಯ ಸಮಿತಿಯ ಉಸ್ತುವಾರಿಯಾಗಿದ್ದರೆಂದು ತಿಳಿದು ಬಂದಿದೆ.
ಆರ್.ಕೆ. ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು ಮತ್ತು ಅವರನ್ನು ಹುಡುಕಿ ಕೊಟ್ಟರೆ 97 ಲಕ್ಷ ಬಹುಮಾನವನ್ನು ನೀಡುವುದಾಗಿ ಘೋಷಣೆಯಾಗಿತ್ತು.