ತಮಿಳುನಾಡು: ಚಿಕ್ಕಮಗಳೂರು. ಪಶ್ಚಿಮ ಘಟ್ಟದ ಮಲೆನಾಡು ಭಾಗದಲ್ಲಿ ನಕ್ಸಲ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಹೊಸಗದ್ದೆ ಪ್ರಭಾ ತಮಿಳುನಾಡಿನ ವೇಲೂರು ಪೊಲೀಸರಿಗೆ ಶರಣಾಗಿದ್ದಾರೆ. ಹನ್ನೊಂದು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಪ್ರಭಾ ಇದೀಗ ತಮಿಳುನಾಡು ಪೊಲೀಸರಿಗೆ ಶರಣಾಗತಿಯಾಗಿದ್ದಾಳೆ.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿ ಹಲವೆಡೆ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹೊಸಗದ್ದೆ ಪ್ರಭಾ ವಿರುದ್ಧ ಶೃಂಗೇರಿ, ಬಾಳೆಹೊನ್ನೂರು, ಕುದುರೆಮುಖ, ಜಯಪುರ ಠಾಣೆ ಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳು ಪ್ರಭಾ ಮೇಲೆ ಇದ್ದು, ರಾಜ್ಯ ಸರ್ಕಾರವು ನಕ್ಸಲ್ ನಾಯಕಿಯ ಪತ್ತೆಗೆ 5 ಲಕ್ಷ ಬಹುಮಾನವನ್ನು ಘೋಷಿಸಿತ್ತು.