ಮುಂಬೈ: ಮೋದಿ ಸರ್ಕಾರದಿಂದ ಹೆಸರು ಬದಲಾವಣೆಯ ಪರ್ವ ಮುಂದುವರೆದಿದ್ದು, ನೌಕಾಪಡೆಯ ವಿವಿಧ ಅಧಿಕಾರಿಗಳ ಶ್ರೇಣಿಯ ಹೆಸರನ್ನು ಬದಲಾಯಿಸಲಾಗುವುದೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಹೆಸರುಗಳನ್ನು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಮರುನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾಣ್‌ನಲ್ಲಿ ನೌಕಾಪಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. ಇಲ್ಲಿನ ಸಿಂಧುದುರ್ಗ ಕೋಟೆಯಲ್ಲಿ ಸ್ಥಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆಯನ್ನು ಇದೇ ವೇಳೆ ಅವರು ಅನಾವರಣಗೊಳಿಸಿದರು.
ನೌಕಾಪಡೆಯ ಯುದ್ಧನೌಕೆಗಳು, ವಿಮಾನಗಳು ಮತ್ತು ಸಬ್‌ಮರಿನ್‌ಗಳು ಇಲ್ಲಿನ ಪ್ರಕೃತಿ ರಮಣೀಯ ತಾರ್ಕರ್ಲಿ ಬೀಚ್‌ನಲ್ಲಿ ನೀಡಿದ ಪ್ರದರ್ಶನ ನೀಡಿತ್ತು.
ಶಿವಾಜಿ ಮಹಾರಾಜ್ ಅವರ ಆಲೋಚನೆಗಳಿಂದ ಸ್ಪೂರ್ತಿ ಪಡೆದು ದೇಶವು ‘ಗುಲಾಮಿ ಮನಃಸ್ಥಿತಿ’ಯನ್ನು ತೊರೆದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಮೋದಿ ಹೇಳಿದರು.
ಸಶಸ್ತ್ರ ಪಡೆಗಳಲ್ಲಿ ನಾರಿಶಕ್ತಿಯನ್ನು ಬಲಗೊಳಿಸಲಾಗುತ್ತಿದೆ. ಎಂದ ಪ್ರಧಾನಿ, ಮೊದಲ ಮಹಿಳಾ ಕಮಾಂಡಿಂಗ್ ಆಫೀಸರ್ ನೇಮಕ ಮಾಡಿರುವುದಕ್ಕೆ ನೌಕಾಪಡೆಯನ್ನು ಅಭಿನಂದಿಸಿದರು.