ಸಿಕ್ಸರ್ ಬಾರಿಸುವ ಶೈಲಿಯಲ್ಲಿ ಪದಗ್ರಹಣ ಮಾಡಿದ ಶಾಸಕ ನವಜೋತ್‌ ಸಿಂಗ್‌ ಸಿಧು!

Prasthutha|

ಚಂಡೀಗಢ:  ಶಾಸಕ ನವಜೋತ್‌ ಸಿಂಗ್‌ ಸಿಧು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

- Advertisement -

ಅಧಿಕಾರ ಸ್ವೀಕಾರದ ಬಗ್ಗೆ ಘೋಷಣೆಯಾಗುತ್ತಿದ್ದಂತೆಯೇ ಎದ್ದು ನಿಂತ ಸಿಧು ಕ್ರಿಕೆಟ್ ನಲ್ಲಿ ಸಿಕ್ಸರ್‌ ಬಾರಿಸುವ ಶೈಲಿಯಲ್ಲಿ ಎರಡು ಕೈಗಳನ್ನು ಸೇರಿಸಿ ಬ್ಯಾಟ್ ಬೀಸುವಂತೆ ತನ್ನ ಕ್ರಿಕೆಟ್ ಜೀವನವನ್ನು ನೆನಪಿಸಿಕೊಂಡಿದ್ದಾರೆ.

ವೀಡಿಯೋ ವೀಕ್ಷಿಸಿ…

- Advertisement -

ಈ ಮೂಲಕ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಸೂಚನೆ ನೀಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಹಾಗೂ ಸಿಧು ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿತ್ತು. ತಮ್ಮ ಖಾತೆ ಕಿತ್ತುಕೊಂಡು ಮತ್ತೊಂದು ಖಾತೆ ನೀಡಿರುವ ಸಿಎಂ ನಡೆಯನ್ನು ಸಿಧು ಖಂಡಿಸಿದ್ದರು.

ಪಂಜಾಬ್ ಕಾಂಗ್ರೆಸ್ ನಲ್ಲಿ ಕರ್ನಾಟಕದ ಮಾದರಿಯ ವಾತಾವರಣ ರೂಪುಗೊಂಡಿದೆ. ಇಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಬಣ ರಾಜಕೀಯ ಅಲ್ಲಿಯೂ ಗೋಚರಿಸುತ್ತಿದೆ. 

Join Whatsapp