Home ಟಾಪ್ ಸುದ್ದಿಗಳು ಪಂಜಾಬ್ ಜನತೆಯ ಅತ್ಯುತ್ತಮ ನಿರ್ಧಾರ: ಎಎಪಿಯ ಪ್ರಚಂಡ ಗೆಲುವಿನ ಬಳಿಕ ನವಜೋತ್ ಸಿಧು ಹೇಳಿಕೆ

ಪಂಜಾಬ್ ಜನತೆಯ ಅತ್ಯುತ್ತಮ ನಿರ್ಧಾರ: ಎಎಪಿಯ ಪ್ರಚಂಡ ಗೆಲುವಿನ ಬಳಿಕ ನವಜೋತ್ ಸಿಧು ಹೇಳಿಕೆ

ಅಮೃತಸರ: ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪ್ರಚಂಡ ಬಹುಮತದಿಂದ ಜಯಗಳಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ರಾಜಕೀಯದಲ್ಲಿ ಬದಲಾವಣೆ ಬಯಸಿದ ಪಂಜಾಬ್ ಜನತೆ ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿದೆಎಂದು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ರಾಜಕೀಯ ಬದಲಾವಣೆ ಬಯಸಿ ಹೊಸ ವ್ಯವಸ್ಥೆಯನ್ನು ರಾಜ್ಯದಲ್ಲಿ ಪರಿಚಯಿಸುವ ಸಲುವಾಗಿ ಪಂಜಾಬ್ ಜನತೆ ಅತ್ಯುತ್ತಮ ನಿರ್ಧಾರಕ್ಕಾಗಿ ತೆಗೆದಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿರುವ ನೀವು ಈ ಫಲಿತಾಂಶವನ್ನು ಹೇಗೆ ಕಾಣುತ್ತಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಧು, ಜನರು ಬದಲಾವಣೆಯನ್ನು ಬಯಸಿ ಎಎಪಿಯನ್ನು ಆರಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಆಯ್ಕೆ ಎಂದಿಗೂ ತಪ್ಪಾಗಲಾರದು. ಜನರ ತೀರ್ಪಿಗೆ ನಾವು ತಲೆಬಾಗಬೇಕು ಎಂದು ತಿಳಿಸಿದ್ದಾರೆ.

ಜನರೊಂದಿಗೆ ನನ್ನ ಸಂಬಂಧ ಕೇವಲ ತೋರಿಕೆಗೆ ಸೀಮಿತವಾಗಿಲ್ಲ. ನಾನು ಅವರೊಂದಿಗೆ ಆಧ್ಯಾತ್ಮಿಕ ಮತ್ತು ಹೃದಯದ ಸಂಬಂಧವನ್ನು ಇರಿಸಿದ್ದೇನೆ. ಈ ಸಂಬಂಧ ಚುನಾವಣೆಯ ಗೆಲುವು ಮತ್ತು ಸೋಲಿಗೆ ಸೀಮಿತವಾಗಿಲ್ಲ. ನಾನು ಪಂಜಾಬ್ ಜನತೆಯಲ್ಲಿ ದೇವರು ಮತ್ತು ಅವರ ಕಲ್ಯಾಣವನ್ನು ನನ್ನ ವಯಕ್ತಿಕ ಕಲ್ಯಾಣವೆಂದು ಪರಿಗಣಿಸುವುದಾಗಿ ಅವರು ತಿಳಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸಿಧು ಅವರು ಅಮೃತಸರ ಪೂರ್ವ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಜೀವನ್ ಜ್ಯೋತ್ ಕೌರ್ ವಿರುದ್ಧ 6000 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಅವರು ಪ್ರಸಕ್ತ ಚುನಾವಣೆಯಲ್ಲಿ 32,929 ಪಡೆದರೆ, ಎಂಎಸ್ ಕೌರ್ ಅವರು 39,520 ಮತಗಳನ್ನು ಪಡೆದಿದ್ದರು.

ಸಿಧು ಈ ಹಿಂದೆ ಅಮೃತಸರದ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2017 ರ ಅಸೆಂಬ್ಲಿ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 42,000 ಮತಗಳ ಅಂತರದಿಂದ ಗೆದ್ದಿದ್ದರು.

Join Whatsapp
Exit mobile version