Home ಜಾಲತಾಣದಿಂದ ರಾಹುಲ್ ಗಾಂಧಿ ವಿರುದ್ಧ ಅಸಭ್ಯ ಪದ ಬಳಸಿದ ‘ಟೈಮ್ಸ್ ನೌ’ ನಿರೂಪಕಿ ನವಿಕಾ ಕುಮಾರಿ ;...

ರಾಹುಲ್ ಗಾಂಧಿ ವಿರುದ್ಧ ಅಸಭ್ಯ ಪದ ಬಳಸಿದ ‘ಟೈಮ್ಸ್ ನೌ’ ನಿರೂಪಕಿ ನವಿಕಾ ಕುಮಾರಿ ; ಕ್ಷಮೆ ಯಾಚನೆ

►ಸಾವರ್ಕರನ ಹೊಸ ಅನುಯಾಯಿ ಎಂದ ನೆಟ್ಟಿಗರು

ದೇಶದಲ್ಲೀಗ ತಮ್ಮನ್ನು ಮಾರಲ್ಪಟ್ಟ ಸುದ್ದಿ ವಾಹಿನಿಗಳದ್ದೇ ಕಾರುಬಾರು. ಕಾರ್ಪೊರೇಟ್ ಕುಳಗಳು ಕೆಲವೊಂದು ಚಾನೆಲ್ ಗಳನ್ನು ಖರೀದಿಸಿದ ಬಳಿಕವಂತೂ ಆಳುವ ವರ್ಗದ ಪರ  ಬಹು ಪರಾಕ್ ಗಳೇ ಸುದ್ದಿ ಎಂಬಂತಾಗಿದೆ. ಈ ನಡುವೆ “ಬಿಜೆಪಿ ವಕ್ತಾರೆ” ಎಂದೇ ನೆಟ್ಟಿಗರಿಂದ ಕರೆಯಲ್ಪಡುವ ‘ಟೈಮ್ಸ್ ನೌ’ ಚಾನೆಲಿನ ನಿರೂಪಕಿ ನವಿಕಾ ಕುಮಾರಿ ನಿನ್ನೆ ರಾತ್ರಿ ಚಾನೆಲಿನ ಕಾರ್ಯಕ್ರಮವೊಂದರಲ್ಲಿ ಪಂಜಾಬ್ ರಾಜಕೀಯದ ಕುರಿತು ಚರ್ಚೆಯ ವೇಳೆ ರಾಹುಲ್ ಗಾಂಧಿಯ ಹೆಸರನ್ನು ಉಲ್ಲೇಖಿಸುವಾಗ ಅಸಭ್ಯ ಪದವನ್ನು ಬಳಸಿದ್ದರು. ಇದೀಗ ಅದಕ್ಕಾಗಿ ಟೈಮ್ಸ್ ನೌ ಚಾನೆಲ್ ಅಧಿಕೃತವಾಗಿ ಕ್ಷಮೆ ಯಾಚನೆ ನಡೆಸಿದೆ. ನವಿಕಾ ಕುಮಾರಿ ಈ ಕುರಿತು ಕ್ಷಮೆ ಯಾಚಿಸಿದ್ದು, ಟೈಮ್ಸ್ ನೌ ಚಾನೆಲ್ ಅದನ್ನು ಪ್ರಕಟಿಸಿದೆ.

ಈ ನಡುವೆ ನವಿಕಾ ಕುಮಾರಿಯ ಅಸಭ್ಯ ಪದಬಳಕೆ ಆಕೆ ಬೆಂಬಲಿಸುವ ಪಕ್ಷದ  ಸಂಸ್ಕೃತಿ ಎಂದು ನೆಟ್ಟಿಗರು ಒಂದೆಡೆ ಕಾಲೆಳೆದರೆ, ಮತ್ತೊಂದೆಡೆ ಆಕೆ ಕ್ಷಮೆ ಯಾಚಿಸಿದ ಬಳಿಕ ಬ್ರಿಟಿಷರೊಂದಿಗೆ ಕ್ಷಮೆ ಯಾಚಿಸಿ ಜೈಲಿನಿಂದ ಪಾರಾಗಿದ್ದ ಸಾವರ್ಕರನ ಹೊಸ ಅನುಯಾಯಿ ನವಿಕಾ ಎಂದು ಕಿಡಿ ಕಾರಿದ್ದಾರೆ.  ಇದರ ಮಧ್ಯೆ ಟ್ವಿಟ್ಟರಿನಲ್ಲಿ ನವಿಕಾ ಪದಬಳಕೆಯ ವಿರುದ್ಧ “ಗಲೀಜು ನವಿಕಾ” ಎಂಬ ಹ್ಯಾಶ್ ಟ್ಯಾಗ್ ಕೂಡಾ ಟ್ರೆಂಡಿಂಗ್ ಆಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ ನವಿಕಾ ಇದೀಗ ಕ್ಷಮೆಯಾಚನೆ ನಡೆಸಿದ್ದಾರೆ

Join Whatsapp
Exit mobile version