ಮನಪಾ ಪ್ರತಿಪಕ್ಷ ನಾಯಕರಾಗಿ ನವೀನ್ ಆರ್. ಡಿಸೋಜಾ ಅಧಿಕಾರ ಸ್ವೀಕಾರ

Prasthutha|

ಮಂಗಳೂರು: ಮಂಗಳೂರು ಪಳ್ನೀರ್ ವಾರ್ಡ್ ನ ಕಾರ್ಪೊರೇಟರ್ ನವೀನ್ ಆರ್. ಡಿಸೋಜಾ ಅವರು ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕರಾಗಿ ಅಧಿಕಾರ ಸ್ವೀಕರಿಸಿದರು.

- Advertisement -


ಪ್ರತಿ ಪಕ್ಷದ ನಾಯಕನಾಗಿ ಸಂವಿಧಾನ ರೀತ್ಯಾ ಕರ್ತವ್ಯ ನಿರ್ವಹಿಸುವುದಾಗಿ ಈ ಸಂದರ್ಭದಲ್ಲಿ ಅವರು ಪ್ರತಿಜ್ಞೆಗೈದರು.


ಮಾಜಿ ಪ್ರತಿಪಕ್ಷ ನಾಯಕ ಎ. ಸಿ. ವಿನಯರಾಜ್ ಅಧಿಕಾರ ವಹಿಸಿಕೊಟ್ಟರು. ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಜೆ. ಆರ್. ಲೋಬೋ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಹಾಲಿ ಕಾರ್ಪೊರೇಟರ್ ಮಿಸ್ಕಿತ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp