Home ಟಾಪ್ ಸುದ್ದಿಗಳು ‘ಹೃದಯಕ್ಕೆ ಒಂದು ಗುದ್ದು’ ವಿಧಾನ ಬಳಸಿ ನವಾಲ್ನಿಯನ್ನು ಕೊಂದಿರಬಹುದು: ಮಾನವ ಹಕ್ಕು ಗುಂಪು ಹೇಳಿಕೆ

‘ಹೃದಯಕ್ಕೆ ಒಂದು ಗುದ್ದು’ ವಿಧಾನ ಬಳಸಿ ನವಾಲ್ನಿಯನ್ನು ಕೊಂದಿರಬಹುದು: ಮಾನವ ಹಕ್ಕು ಗುಂಪು ಹೇಳಿಕೆ

ಮಾಸ್ಕೋ: ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಯನ್ನು ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಗುಂಪು ಗುಲಾಗು.ನೆಟ್’ನ ಸ್ಥಾಪಕ ವ್ಲಾದಿಮಿರ್ ಒಸೆಚ್‍ಕಿನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಷ್ಯಾ ಕೆಜಿಬಿಯ ಕುಖ್ಯಾತ ವಿಧಾನವಾದ `ಹೃದಯಕ್ಕೆ ಒಂದು ಗುದ್ದು’ ವಿಧಾನ ಬಳಸಿ ವಿರೋಧ ಪಕ್ಷದ ನಾಯಕನನ್ನು ಕೊಂದಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಜೈಲಿನಲ್ಲಿ ಮೃತಪಟ್ಟಿದ್ದ ನವಾಲ್ನಿಯ ತಲೆ ಮತ್ತು ಎದೆಯ ಭಾಗದಲ್ಲಿ ಜಜ್ಜುಗುರುತು ಕಂಡುಬಂದಿದೆ. ಇದು ಕೆಜಿಬಿ (1991ರವರೆಗೆ ರಷ್ಯಾದ ರಾಷ್ಟ್ರೀಯ ಭದ್ರತಾ ಸಮಿತಿಗೆ ಈ ಹೆಸರಿತ್ತು)ಯ ವಿಶೇಷ ಪಡೆ ವಿಭಾಗದ ಕುಖ್ಯಾತ `ಒಂದು ಗುದ್ದು ದಂಡನಾ ವಿಧಾನವಾಗಿದೆ ಎಂದು ಒಸೆಚ್‍ಕಿನ್‍ ಹೇಳಿದ್ದಾರೆ.

ಈ ಮಧ್ಯೆ ನವಾಲ್ನಿ ಮರಣದ ಕಾರಣವನ್ನು ರಷ್ಯಾ ಅಧಿಕಾರಿಗಳು ಇದುವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ. ನವಾಲ್ನಿಯ ಮೃತದೇಹವನ್ನು ಕುಟುಂಬದವರಿಗೆ ಇದುವರೆಗೂ ಹಸ್ತಾಂತರಿಸಿಲ್ಲ. ಎರಡು ವಾರಗಳ ರಾಸಾಯನಿಕ ಪರೀಕ್ಷೆಯ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ನವಾಲ್ನಿಯ ಆಪ್ತರು ಹೇಳಿದ್ದಾರೆ.

ನವಾಲ್ನಿಗೆ ವಿಷಪ್ರಾಶನ ಮಾಡಿ ಸಾಯಿಸಲಾಗಿದೆ. ಈ ಹತ್ಯೆಯನ್ನು ಮುಚ್ಚಿಡಲು ಮೃತದೇಹವನ್ನು ಕುಟುಂಬದವರಿಗೆ ಒಪ್ಪಿಸಲು ವಿಳಂಬಿಸುತ್ತಿದ್ದಾರೆ ಎಂದು ಅವರ ಪತ್ನಿ ಯೂಲಿಯಾ ಆರೋಪಿಸಿದ್ದಾರೆ.

Join Whatsapp
Exit mobile version