ಆಸ್ಪತ್ರೆಯ ತಪ್ಪು ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ನೌಷಾದ್: ಮಾ.14ರಂದು ದೇರಳಕಟ್ಟೆಯಲ್ಲಿ ಬೃಹತ್ ಧರಣಿ

Prasthutha|

ಮಂಗಳೂರು: ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ನಿರ್ಲಕ್ಷ್ಯ, ತಪ್ಪಾದ ಚಿಕಿತ್ಸೆಗೆ ಕಾಲು ಕಳೆದುಕೊಂಡ ಕುರ್ನಾಡು ಗ್ರಾಮದ ನೌಷಾದ್ ಎಂಬ ಯುವಕನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಮಾರ್ಚ್ 14ರಂದು ದೇರಳಕಟ್ಟೆಯಲ್ಲಿ ಬೃಹತ್ ಸಾಮೂಹಿಕ ಧರಣಿ ಹಮ್ಮಿಕೊಳ್ಳಲಾಗಿದೆ.
ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಪ್ಪು ಚಿಕಿತ್ಸೆ, ಗಂಭೀರ ಕರ್ತವ್ಯ ಲೋಪ, ನಿರ್ಲಕ್ಷ್ಯದಿಂದಾಗಿ ನನ್ನ ಎಡಗಾಲನ್ನು ಕಳೆದುಕೊಂಡಿದ್ದೇನೆ. ಆಗಿರುವ ತಪ್ಪಿಗಾಗಿ ನನಗೆ ಪರಿಹಾರ ಧನ ಕೊಡುವುದಾಗಿ ಒಪ್ಪಿಕೊಂಡು ಆಸ್ಪತ್ರೆ ಆಡಳಿತ ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನನ್ನು ಅಲೆದಾಡಿಸಿ ಈಗ ನಡು ಬೀದಿಯಲ್ಲಿ ಕೈಬಿಟ್ಟಿದೆ. ವಿದೇಶದ ಉದ್ಯೋಗ, ಭವಿಷ್ಯವನ್ನು ಕಳೆದು ಕೊಂಡಿರುವ ನಾನೀಗ ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದೇನೆ. ಜನಪರ ಸಂಘಟನೆಗಳ ಬೆಂಬಲದೊಂದಿಗೆ ದೇರಳಕಟ್ಟೆ ಜಂಕ್ಷನ್’ನಲ್ಲಿ ಮಾರ್ಚ್ 14, ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಒಂದು ದಿನದ ಧರಣಿ ನಡೆಸುತ್ತಿದ್ದೇನೆ. ನನಗಾಗಿರುವ ಘೋರ ಅನ್ಯಾಯದ ವಿರುದ್ದ ನನ್ನ ಕುಟುಂಬ ನಡೆಸುವ ಹೋರಾಟದಲ್ಲಿ ನೀವುಗಳು ಭಾಗಿಯಾಗಿ ಬಲ ತುಂಬಬೇಕಾಗಿ ವಿನಂತಿಸುತ್ತಿದ್ದೇನೆ ಎಂದು ಸಂತ್ರಸ್ತ ಯುವಕ ನೌಷಾದ್ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ನೌಷಾದ್ ಹೋರಾಟಕ್ಕೆ ಡಿವೈಎಫ್’ಐ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ.



Join Whatsapp
Exit mobile version