Home ಟಾಪ್ ಸುದ್ದಿಗಳು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಮನೋಜ ನಾಯ್ಕ ನಿಧನ

ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಮನೋಜ ನಾಯ್ಕ ನಿಧನ

ಭಟ್ಕಳ:  ಕಬಡ್ಡಿ ಆಟಗಾರನಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದ ಮನೋಜ ನಾಯ್ಕ ಹೃದಯಾಘಾತದಿಂದ ನಿಧನರಾದರು.

ಭಟ್ಕಳ ಅತ್ಯುತ್ತಮ ಕಬಡ್ಡಿ ತಂಡಗಳಲ್ಲೊಂದಾಗಿರುವ ಪರಶುರಾಮ ಭಟ್ಕಳದ ಕೀ ಪ್ಲೇಯರ್ ಆಗಿದ್ದ ಮನೋಜ ನಾಯ್ಕ ತಂಡ ಹತ್ತು ಹಲವಾರು ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ನೆರವಾಗಿದ್ದರು.

ಆಟದ ಜೊತೆ ಎದುರಾಳಿಯನ್ನು ಮಣಿಸುವ ತಂತ್ರಗಾರಿಕೆಯಲ್ಲಿಯೂ ಮನೋಜ ನಾಯ್ಕ ಮುಂಚೂಣಿಯಲ್ಲಿದ್ದರು. ತನ್ನ ಆಕ್ರಮಣಕಾರಿ ಆಟದ ಜೊತೆ ತಂಡವನ್ನೂ ಆಕ್ರಮಣಕಾರಿಯಾಗಿ ಮುನ್ನಡೆಸುತ್ತಿದ್ದರು

ನಾಯ್ಕ ಅಕಾಲಿಕ ಅಗಲಿಕೆ ಹಲವು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Join Whatsapp
Exit mobile version