Home ಟಾಪ್ ಸುದ್ದಿಗಳು ಮಗನಿಂದಲೇ ಕೊಲೆಯಾದ ‘ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ’ದ ನಟಿ!

ಮಗನಿಂದಲೇ ಕೊಲೆಯಾದ ‘ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ’ದ ನಟಿ!

ಮಧುರೈ: ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಕಡೈಸಿ ವಿವಸೈ’ ಚಿತ್ರದಲ್ಲಿ ನಟಿಸಿದ್ದ ಕಾಸಮ್ಮಳ್​ (71) ಎಂಬವರನ್ನು ಆಕೆಯ ಮಗನೇ ಹೊಡೆದು ಕೊಂದ ದುರಂತ ಘಟನೆ ನಡೆದಿದೆ. ಕಾಸಮ್ಮಳ್​ ಮಗ ನಾಮಕೋಡಿ (52)ನನ್ನು ಪೊಲೀಸರು ಬಂಧಿಸಿದ್ದಾರೆ.

ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಸಮೀಪದ ಅನಯೂರಿನಲ್ಲಿ ಘಟನೆ ನಡೆದಿದೆ. ಎಂದಿನಂತೆ ಕುಡಿಯಲು ಹಣಬೇಕು ಎಂದು ಹಣಕ್ಕೆ ಬೇಡಿಕೆಯಿಟ್ಟಿದ್ದ. ಹಣ ಕೊಡಲು ಒಪ್ಪದ ಕಾಸಮ್ಮಳ್​ ಅವರ ತಲೆಗೆ ಮಗ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಕಾಜಮ್ಮಳ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಪೊಲೀಸರು ತಿಳಿಸಿದ್ದಾರೆ.

ಬಾಲಸಾಮಿ-ಕಾಸಮ್ಮಾಳ್ ದಂಪತಿಗೆ ನಾಮಕೋಡಿ ಮತ್ತು ತನಿಕೋಡಿ ಎಂಬ ಇಬ್ಬರು ಮಕ್ಕಳಿದ್ದಾರೆ. ನಾಮಕೋಡಿ ಪತ್ನಿಯಿಂದ ಬೇರ್ಪಟ್ಟು ಕಳೆದ 15 ವರ್ಷಗಳಿಂದ ಕಾಸಮ್ಮಳ್​ ಜತೆ ವಾಸವಾಗಿದ್ದ. ಕುಡಿತದ ಚಟಕ್ಕೆ ಬಿದ್ದಿದ್ದ ನಾಮಕೋಡಿ ತಾಯಿ ಕಸಮಳ್ ಬಳಿ​ ಹಣಕ್ಕಾಗಿ ನಿತ್ಯ ಜಗಳವಾಡುತ್ತಿದ್ದನು.

ಜಗಳದಲ್ಲಿ ಕಾಸಮ್ಮಳ್ ತಲೆಗೆ ಹೊಡೆದ ಮಗ!​

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಕಾಸಮ್ಮ ಅವರನ್ನು ಮಗ ಎಬ್ಬಿಸಿ ಜಗಳ ತೆಗೆದು ತಲೆಗೆ ಹೊಡೆದು ಕೊಂದೇ ಬಿಟ್ಟಿದ್ದಾನೆ. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

‘ಕಡೈಸಿ ವಿವಸೈ’ ಚಿಕ್ಕಮ್ಮನ ಪಾತ್ರ

ವಿಜಯ್ ಸೇತುಪತಿ ಹಾಗೂ 85ರ ಹರೆಯದ ನಲ್ಲಂದಿ ‘ಕಡೈಸಿ ವಿವಸೈ’ ಚಿತ್ರದಲ್ಲಿ ಹಲವು ಗ್ರಾಮಸ್ಥರು ನಟಿಸಿದ್ದಾರೆ. ಕಾಸಮ್ಮಳ್​ ವಿಜಯ್ ಸೇತುಪತಿ ಅವರ ಚಿಕ್ಕಮ್ಮನ ಪಾತ್ರವನ್ನು ಮಾಡಿದ್ದಾರೆ.

Join Whatsapp
Exit mobile version