Home ಕರಾವಳಿ ಮುಮ್ತಾಝ್ ಅಲಿ ಆತ್ಮಹತ್ಯೆಗೆ ಕಾರಣಕರ್ತ ಎಂಬ ಆರೋಪ: ನಾಸಿರ್ ಲಕ್ಕಿಸ್ಟಾರ್‌‌ಗೆ ಆ್ಯಸಿಡ್ ಎರಚುವ ಬೆದರಿಕೆ

ಮುಮ್ತಾಝ್ ಅಲಿ ಆತ್ಮಹತ್ಯೆಗೆ ಕಾರಣಕರ್ತ ಎಂಬ ಆರೋಪ: ನಾಸಿರ್ ಲಕ್ಕಿಸ್ಟಾರ್‌‌ಗೆ ಆ್ಯಸಿಡ್ ಎರಚುವ ಬೆದರಿಕೆ

ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಂಗಳೂರು: ಉದ್ಯಮಿ ಮುಮ್ತಾಝ್ ಅಲಿ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಉದ್ಯಮಿ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಗೆ ಆ್ಯಸಿಡ್ ಎರಚುವ ಬೆದರಿಕೆ ಬಂದಿದ್ದು, ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ನಮ್ಮೂರ ಸುದ್ದಿ’ ವಾಟ್ಸಾಪ್ ಗ್ರೂಪ್ ನಲ್ಲಿ ಅಕ್ಬರ್ ಕೃಷ್ಣಾಪುರ ಎಂಬಾತ ಆ್ಯಸಿಡ್ ಎರಚುವ ಬೆದರಿಕೆ ಹಾಕಿ 20 ಸೆಕೆಂಡ್ ನ ವಾಯ್ಸ್ ಮೆಸೇಜ್ ಹರಿಯಬಿಟ್ಟು ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ನಾಸಿರ್ ಲಕ್ಕಿಸ್ಟಾರ್ ದೂರಿನಲ್ಲಿ ತಿಳಿಸಿದ್ದಾರೆ. ಆ ಆಡಿಯೋ ಕೂಡ ವೈರಲ್ ಆಗಿದೆ.

ನಾಸಿರ್ ಲಕ್ಕಿಸ್ಟಾರ್ ನೀಡಿರುವ ದೂರಿನಲ್ಲಿ, ಮುಮ್ತಾಝ್ ಅಲಿ ಯವರ ಆತ್ಮಹತ್ಯೆಯ ಹಿನ್ನಲೆಯ ವಿಚಾರದಲ್ಲಿ ‘ಇತ್ತು ಕೃಷ್ಣಾಪುರ’ ಎಂಬವರು ಅಡ್ಮಿನ್ ಆಗಿರುವ ‘ನಮ್ಮೂರ ಸುದ್ದಿ’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ದಿನಾಂಕ 24.10.2024 ರಂದು ಮಧ್ಯಾಹ್ನ ಸುಮಾರು 12:43 ಗಂಟೆಗೆ ಅಕ್ಟರ್ ಕೃಷ್ಣಾಪುರ ಎಂಬಾತನು ಮುಮ್ತಾಝ್ ಅಲಿಯವರ ಆತ್ಮಹತ್ಯೆಗೆ ನಾನು ಕೂಡಾ ಕಾರಣನಾಗಿರುವೆನೆಂದು ಬಿಂಬಿಸಿ, ಆತನ ಮೊಬೈಲ್ ಸಂಖ್ಯೆ ***214 ರಿಂದ ನನ್ನನ್ನು ಉದ್ದೇಶಿಸಿ, ಬ್ಯಾರಿ ಭಾಷೆಯಲ್ಲಿ “ಇವರನ್ನೆಲ್ಲಾ ಏನು ಮಾಡಬೇಕೆಂದರೆ, ಮೊದಲು ಅಡ್ಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಇದನ್ನು ಬೈಕಂಪಾಡಿಯ ಅಂಗರಗುಂಡಿಯವರು ಮಾಡಬೇಕು. ಮುಖ ತೋರಿಸಬಾರದು, ಅಸಿಡ್ ಎರಚಬೇಕು” ಎಂಬುದಾಗಿ ವಾಟ್ಸಾಪ್ ಗ್ರೂಪ್ ನಲ್ಲಿ ನನಗೆ ಆಸಿಡ್ ಎರಚುವಂತೆ ಪ್ರಚೋದಿಸಿ 20 ಸೆಕೆಂಡ್ ನ ವ್ಯಾಸ್ ಮೆಸೇಜ್ ನ್ನು ಹರಿಯ ಬಿಟ್ಟು, ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

Join Whatsapp
Exit mobile version