ನವದೆಹಲಿ: ಭೂಮಿ ಮೇಲೆ ಬೆಳೆಯುವ ಟೊಮೆಟೋ ಬ್ಯಾಹ್ಯಾಕಾಶದಲ್ಲಿಯೂ ಬೆಳೆಯುತ್ತಾರಾ ಎಂದು ಕೇಳಿದರೆ ಹೌದು ಎನ್ನುವಂತೆ ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಟೊಮೆಟೋ ಪೋಟೋವನ್ನು ನಾಸಾ ಹಂಚಿಕೊಂಡಿದೆ.
ಇವು ಬಾಹ್ಯಾಕಾಶದಲ್ಲಿ ಬೆಳೆದ ಅಥವಾ ಐಎಸ್‌ಎಸ್ನಲ್ಲಿ ಕೊಯ್ಲು ಮಾಡಿದ ಮೊದಲ ಟೊಮೆಟೊಗಳಾಗಿವೆ.
NASA (National Aeronautics and Space Administration) ಗಗನಯಾತ್ರಿ ಫ್ರಾಂಕ್ ರುಬಿಯೊ ಇತ್ತೀಚೆಗೆ ಸುಮಾರು ಒಂದು ವರ್ಷದ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station -ISS) ಕಾಣೆಯಾದ ಎರಡು ರಾಗೋ ಟೊಮೆಟೊಗಳ ಕಥೆಯನ್ನು ಫೋಟೋ ಸಹಿತ ಹಂಚಿಕೊಂಡಿದ್ದಾರೆ.