Home ಟಾಪ್ ಸುದ್ದಿಗಳು ಟಾಲಿವುಡ್ ಹಾಸ್ಯ ನಟ ನರ್ಸಿಂಗ್ ಯಾದವ್ ನಿಧನ

ಟಾಲಿವುಡ್ ಹಾಸ್ಯ ನಟ ನರ್ಸಿಂಗ್ ಯಾದವ್ ನಿಧನ

ಹೈದರಾಬಾದ್ : ಖ್ಯಾತ ಟಾಲಿವುಡ್ ಹಾಸ್ಯ ನಟ ನರ್ಸಿಂಗ್ ಯಾದವ್ (52) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನರ್ಸಿಂಗ್ ಯಾದವ್ ಅವರಿಗೆ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಗೆ ಸಂಬಂಧಿಸಿ ಚಿಕಿತ್ಸೆ ನೀಡಲಾಗುತಿತ್ತು. ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ನಟಿಸಿದ್ದ ನರ್ಸಿಂಗ್ ಯಾದವ್ ಅವರು ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

ವಿಜಯ ನಿರ್ಮಲ ನಿರ್ದೇಶದ ಹೇಮಾಹೆಮಿಲು ಸಿನೆಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನರ್ಸಿಂಗ್ ಯಾದವ್, ಕ್ಷಣಕ್ಷಣಂ, ಶಂಕರ್ ದಾದಾ ಎಂಬಿಬಿಎಸ್, ಅನುಕೋಕುಂಡ ಒಕ ರೋಜು, ನುವ್ವಾಸ್ತಾನುಂಟೆ ನೇನೊದ್ದಂಟಾನಾ ಸೇರಿದಂತೆ ಸಾಕಷ್ಟು ಜನಪ್ರಿಯ ಸಿನೆಮಾಗಳಲ್ಲಿ ಹಾಸ್ಯ ಹಾಗೂ ಖಳ ನಟನಾಗಿ ನರ್ಸಿಂಗ್ ಯಾದವ್ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಜನಮೆಚ್ಚುಗೆ ಪಡೆದಿದ್ದಾರೆ.  

Join Whatsapp
Exit mobile version