Home ಟಾಪ್ ಸುದ್ದಿಗಳು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಅದಾನಿ ಪೆವಿಲಿಯನ್’, ‘ರಿಲಯನ್ಸ್ ಎಂಡ್’! : ವ್ಯಾಪಕ ಆಕ್ರೋಶ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಅದಾನಿ ಪೆವಿಲಿಯನ್’, ‘ರಿಲಯನ್ಸ್ ಎಂಡ್’! : ವ್ಯಾಪಕ ಆಕ್ರೋಶ

ಅಹಮದಾಬಾದ್ : ಗುಜರಾತ್ ನಲ್ಲಿ ಸರ್ಕಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಕ್ರೀಡಾಂಗಣದಲ್ಲಿ ‘ಅದಾನಿ ಪೆವಿಲಿಯನ್’ ಮತ್ತು ‘ರಿಲಯನ್ಸ್ ಎಂಡ್’ ಇರುವುದು ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿದ್ದ “ಹಮ್ ದೋ, ಹಮಾರೇ ದೋ” ಎಂಬ ಹೇಳಿಕೆಯು ಇಲ್ಲಿ ಅನ್ವರ್ಥಕವಾಗಿದೆ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. “ಎಲ್ಲವೂ ಆಯಿತು, ಇನ್ನು ಗುಜರತ್ ಅನ್ನು ಮೋದಿಸ್ತಾನ್ ಎಂದೂ, ರಾಜ್ ಕೋಟ್ ಅನ್ನು ರಿಲಯನ್ಸ್ ಕೋಟ್ ಎಂದೂ ಮರುನಾಮಕರಣ ಮಾಡಲಿಕ್ಕಿದೆಯೇ?”
 ಎಂದು ಒಬ್ಬರು ಪ್ರಶ್ನಿಸಿದ್ದಾರೆ.    

“ಇಬ್ಬರು ಬಂಡವಾಳಶಾಹಿಗಳ ಹೆಸರಿರುವ ಸ್ಟೇಡಿಯಂಗೆ ಮೋದಿ ಹೆಸರಿಟ್ಟದ್ದು ಒಳ್ಳೆಯದಾಯಿತು. ಇಲ್ಲವಾದರೆ, ಸರ್ದಾರ್ ಪಟೇಲ್ ಗೆ ಅವಮಾನವಾಗುತಿತ್ತು” ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

https://twitter.com/itsAJVSP/status/1364535752487546882
Join Whatsapp
Exit mobile version