ಬೆಂಗಳೂರು: ಉದ್ಯೋಗ ಸೃಷ್ಟಿಯ ಪ್ರಶ್ನೆಗೆ ಯುವಕರು ಪಕೋಡಾ ಮಾರುತ್ತಿಲ್ಲವೇ ಎಂದು ಕೇಳಿದ ಜಗತ್ತಿನ ಏಕೈಕ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಗ್ಯಾಸ್, ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ, ದೇಶವನ್ನು ಪಕೋಡಾ ಮಾಡಲೂ ಆಗದ ಸ್ಥಿತಿಗೆ ತಂದಿಟ್ಟಿದ್ದಾರೆ’ ಇದು ಬೇಜವಾಬ್ದಾರಿತನ ಹಾಗೂ ಮೂರ್ಖತನದ ಪರಮಾವಧಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅಧಿಕಾರ ಹಿಡಿದ ಪ್ರಧಾನಿ ಮೋದಿಯವರು ಸೃಷ್ಟಿಸಿದ್ದು ಐತಿಹಾಸಿಕ ನಿರುದ್ಯೋಗ. ತಾವೇನೋ ದುಡಿಯಲಾರದ ಸೋಂಬೇರಿತನದಲ್ಲಿ ಸ್ವಾಭಿಮಾನ ಮರೆತು ಭಿಕ್ಷೆ ಬೇಡಿರಬಹುದು, ಆದರೆ ದೇಶದ ಸ್ವಾಭಿಮಾನಿ ಯುವಜನತೆ ಭಿಕ್ಷೆ ಬೇಡಲಾರರು! ಬದುಕಲು ಜನತೆಗೆ ಉದ್ಯೋಗ ಬೇಕಿದೆ’ ಎಂದು ಕಾಂಗ್ರೆಸ್ ಹೇಳಿದೆ.