Home ಟಾಪ್ ಸುದ್ದಿಗಳು ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಅಲ್ಲ, ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಪ್ರಧಾನಿ:...

ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಅಲ್ಲ, ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಪ್ರಧಾನಿ: ಎಎಪಿ ಸಂಸದ ಸಂಜಯ್ ಸಿಂಗ್

ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಅಲ್ಲ, ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಪ್ರಧಾನಿ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ದೆಹಲಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲವೇ ನಿಮಿಷಗಳ ಮೊದಲು ಸಂಜಯ್ ಸಿಂಗ್ ಹೀಗೆ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.

ಸಂಜಯ್ ಸಿಂಗ್‌ ಅವರನ್ನು ಪೋಲೀಸ್ ಸಿಬ್ಬಂದಿಯಿಂದ ಹೊರಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ನೋಡಿದ ಎಎಪಿ ನಾಯಕ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು ಗೇಲಿ ಮಾಡುವ ಅವಕಾಶವನ್ನು ಬಳಸಿಕೊಂಡಿದ್ದಾರೆ.

ಮೋದಿ ಜಿ ಅದಾನಿಯ ಪ್ರಧಾನಿ, ಭಾರತದ್ದಲ್ಲ, ಅದಾನಿ ಹಗರಣದ ತನಿಖೆ ಯಾವಾಗ” ಎಂದು ಅವರು ಕೇಳಿದ್ದಾರೆ.

ನ್ಯಾಯಾಲಯ ಇಂದು ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Join Whatsapp
Exit mobile version