ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಅಲ್ಲ, ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಪ್ರಧಾನಿ: ಎಎಪಿ ಸಂಸದ ಸಂಜಯ್ ಸಿಂಗ್

Prasthutha|

ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಅಲ್ಲ, ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಪ್ರಧಾನಿ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

- Advertisement -

ದೆಹಲಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲವೇ ನಿಮಿಷಗಳ ಮೊದಲು ಸಂಜಯ್ ಸಿಂಗ್ ಹೀಗೆ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.

ಸಂಜಯ್ ಸಿಂಗ್‌ ಅವರನ್ನು ಪೋಲೀಸ್ ಸಿಬ್ಬಂದಿಯಿಂದ ಹೊರಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ನೋಡಿದ ಎಎಪಿ ನಾಯಕ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು ಗೇಲಿ ಮಾಡುವ ಅವಕಾಶವನ್ನು ಬಳಸಿಕೊಂಡಿದ್ದಾರೆ.

- Advertisement -

ಮೋದಿ ಜಿ ಅದಾನಿಯ ಪ್ರಧಾನಿ, ಭಾರತದ್ದಲ್ಲ, ಅದಾನಿ ಹಗರಣದ ತನಿಖೆ ಯಾವಾಗ” ಎಂದು ಅವರು ಕೇಳಿದ್ದಾರೆ.

ನ್ಯಾಯಾಲಯ ಇಂದು ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.