Home ಟಾಪ್ ಸುದ್ದಿಗಳು ನಾರಾಯಣಪುರ ಮತಾಂತರ ಆರೋಪ: ಮತ್ತೆ ಐವರ ಬಂಧನ

ನಾರಾಯಣಪುರ ಮತಾಂತರ ಆರೋಪ: ಮತ್ತೆ ಐವರ ಬಂಧನ

ರಾಯ್ ಪುರ: ಛತ್ತೀಸ್ ಗಡದ ನಾರಾಯಣಪುರದಲ್ಲಿ ನಡೆದಿದೆ ಎನ್ನಲಾದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆ ಸಂಬಂಧ ಪೊಲೀಸರು ಮತ್ತೆ ಐವರನ್ನು ಬಂಧಿಸಿದ್ದಾರೆ.

ಎಡ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಗೊರಾ ಗ್ರಾಮದಲ್ಲಿ ಈ ಸಂಬಂಧ ಬಂಧಿತರಾದವರ ಸಂಖ್ಯೆಯು 8ಕ್ಕೇರಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರರಾಜ್ ಪಿ ತಿಳಿಸಿದ್ದಾರೆ.

48ರ ಹರೆಯದ ಪ್ರೇಮಸಾಗರ್ ನೇತಾ, ಲಚ್ಚು ಕರಂಗ (32), ಸಂತುರಾಂ ದುಗ್ಗ (35), ಪುನುರಾಂ ದುಗ್ಗ (45) ಹಾಗೂ ರಜ್ಮಾನ್ ಕರಂಗ (46) ಬಂಧಿತರು.ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಬುಡಕಟ್ಟು ಜನರು, ಬುಡಕಟ್ಟು ಕ್ರಿಶ್ಚಿಯನರು, ಪೊಲೀಸರ ಮೇಲೆ ದಾಳಿ ಎಂಬ ಮೂರು ಪ್ರಪ್ರತ್ಯೇಕ ದೂರುಗಳ ಮೇಲೆ ಎಡ್ಕಾ ಠಾಣೆಯಲ್ಲಿ ಎಫ್’ಐಆರ್ ದಾಖಲಾಗಿದೆ.

ಕಳೆದೆರಡು ತಿಂಗಳುಗಳಿಂದ ಇಲ್ಲಿನ ಬೇನೂರು ಮೊದಲಾದೆಡೆ ಮತಾಂತರ ಸಂಬಂಧಿತ ಗಲಭೆಗಳು ನಡೆದಿರುವುದಾಗಿ ಹೇಳಲಾಗಿದೆ.

ಜನವರಿ 2ರಂದು ಒಂದು ಚರ್ಚ್ ಅನ್ನು ಧ್ವಂಸಗೊಳಿಸಲಾಗಿದ್ದು, ಈ ಗಲಭೆಯಲ್ಲಿ ಒಬ್ಬ ಐಪಿಎಸ್ ಅಧಿಕಾರಿ ಸಹಿತ ಆರು ಮಂದಿ ಪೊಲೀಸರು ಗಾಯಗೊಂಡಿದ್ದರು.

Join Whatsapp
Exit mobile version