Home ಕರಾವಳಿ ಶೀಘ್ರದಲ್ಲೇ ಲೇಡಿ ಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು: ಮೇಯರ್ ಭರವಸೆ

ಶೀಘ್ರದಲ್ಲೇ ಲೇಡಿ ಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು: ಮೇಯರ್ ಭರವಸೆ

ಮಂಗಳೂರು: ನಗರದ ಲೇಡಿ ಹಿಲ್ ವೃತ್ತಕ್ಕೆ ಶೀಘ್ರದಲ್ಲೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ತಮ್ಮನ್ನು ಭೇಟಿಯಾದ ಮಂಗಳೂರು ತಾಲೂಕು ಬಿಲ್ಲವ ಸಂಘದ ಮುಖಂಡರಿಗೆ ಭರವಸೆ ನೀಡಿದ್ದಾರೆ.

ನಾರಾಯಣ ಗುರು ವೃತ್ತ ನಾಮಕರಣ ಆದಷ್ಚು ಶೀ ಘ್ರ ನಡೆಸುವಂತೆ ಮಂಗಳೂರು ತಾಲೂಕು ಬಿಲ್ಲವ ಸಂಘದ ನಿಯೋಗವು ಮೇಯರ್ ಅವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್, ನಾಮಕರಣದ ವಿಚಾರದಲ್ಲಿ ಸರಕಾರಕ್ಕೆ ಬರೆಯಲಾಗಿದ್ದು, ನೆನೆಪೋಲೆಯನ್ನು ಕೂಡ ಬರೆಯಲಾಗಿದೆ. ಪೊಲೀಸ್ ಇಲಾಖೆಯಿಂದ ವರದಿ ಕೂಡ ಮಾಡಲಾಗಿದೆ. ಸರಕಾರದಿಂದ ಬಂದ ಕೂಡಲೇ ನಾಮಕರಣ ಮಾಡಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ನಿಯೋಗಕ್ಕೆ ತಿಳಿಸಿದ್ದಾರೆ.

ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜೀತೇಂದ್ರ ಜೆ. ಸುವರ್ಣ, ಗೌರವಾಧ್ಯಕ್ಷ ರಂಜನ್ ಮಿಜಾರ್, ಕಾರ್ಯದರ್ಶಿಲೋಕನಾಥ ಪೂಜಾರಿ,ರವಿಕಲಾ, ಪಾರ್ವತಿ ಅಮೀನ್, ಶ್ರೀನಿವಾಸ್, ಸುರೇಶ್ಚಂದ್ರ ಕೋಟ್ಯಾನ್,ಪ್ರಜ್ವಲ್, ಸುನೀಲ್ ಅವರಿದ್ದರು.

Join Whatsapp
Exit mobile version