Home ಟಾಪ್ ಸುದ್ದಿಗಳು ನಂದಿನಿ ಹಾಲನ್ನು ಕೇರಳಿಗರು ಬಳಸಬೇಡಿ: ಕೇರಳ ಸಚಿವೆ

ನಂದಿನಿ ಹಾಲನ್ನು ಕೇರಳಿಗರು ಬಳಸಬೇಡಿ: ಕೇರಳ ಸಚಿವೆ

ಬೆಂಗಳೂರು: ಕೆಎಂಎಫ್’ನ ನಂದಿನಿ ಹಾಲು ಕಳಪೆ ಗುಣಮಟ್ಟ ಹೊಂದಿದೆ. ಹಾಗಾಗಿ ಕೇರಳಿಗರು ಆ ಹಾಲನ್ನು ಬಳಸಬಾರದು ಎಂದು ಕೇರಳದ ಪಶುಸಂಗೋಪನಾ ಸಚಿವೆ ಜೆ ಚಿಂಚು ರಾಣಿ ದರ್ಪದ ಮಾತನಾಡಿದ್ದಾರೆ.


ಶುಕ್ರವಾರ ಮಲಪ್ಪುರಂನಲ್ಲಿ ಮಿಲ್ಮಾದ (ಕೇರಳ ಹಾಲು ಒಕ್ಕೂಟ) ಮಾರಾಟ ಮಳಿಗೆ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ ವರದಿ ಮಾಡಿದೆ.


ಕೇರಳದಲ್ಲಿ ಕೆಎಂಎಫ್ ತನ್ನ ಮಾರಾಟವನ್ನು ವಿಸ್ತರಿಸಲು ನೋಡುತ್ತಿದೆ. ಇದು ಅನೈತಿಕವಾದದ್ದು. ಕರ್ನಾಟಕ ತಕ್ಷಣವೇ ಇದನ್ನು ನಿಲ್ಲಸದಿದ್ದರೆ ನಾವು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಗೆ ದೂರು ನೀಡಲಿದ್ದೇವೆ ಎಂದು ಹೇಳಿದ್ದಾರೆ.

Join Whatsapp
Exit mobile version