ರಾಮದುರ್ಗ : ವಿಶ್ವದ ಅತೀ ಎತ್ತರದ ನಂದಿ ವಿಗ್ರಹ ಲೋಕಾರ್ಪಣೆ

Prasthutha|

ರಾಮದುರ್ಗ ತಾಲೂಕಿನ ಹೊರವಲಯದ ಮುಳ್ಳೂರು ಗುಡ್ಡದಲ್ಲಿ ಸ್ಥಾಪಿಸಿರುವ ದೇಶದಲ್ಲೆ ಅತಿ ಎತ್ತರದ್ದು ಎನ್ನಲಾದ ‘ನಂದಿ’ ವಿಗ್ರಹದ ಲೋಕಾರ್ಪಣೆ ಕಾರ್ಯಕ್ರಮ ಮಹಾಶಿವರಾತ್ರಿ ದಿನವಾದ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಅದನ್ನು ನೋಡಲು ಭಕ್ತರು ದಂಡು ದಂಡಾಗಿ ಬರುತ್ತಿದ್ದಾರೆ.

- Advertisement -

ಅಶೋಕ ವನದಲ್ಲಿ ಸ್ಥಾಪಿಸಿರುವ ರಾಜ್ಯದ 2ನೇ ಅತಿ ಎತ್ತರದ್ದು ಎನ್ನಲಾದ 78 ಅಡಿ ಎತ್ತರದ ಶಿವನ (ರಾಮೇಶ್ವರ) ಮೂರ್ತಿ ಮುಂಭಾಗದಲ್ಲಿ ನಂದಿ (ಬಸವಣ್ಣ) ಮೂರ್ತಿಯನ್ನು ಸ್ಥಾಪಿಸಿ ಗುಡ್ಡವನ್ನು ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. ‘22 ಅಡಿ ಎತ್ತರ, 32 ಅಡಿ ಉದ್ದ ಹಾಗೂ 14 ಅಡಿ ಅಗಲವಿರುವ ಈ ಮೂರ್ತಿ ಸಿದ್ಧಪಡಿಸಲು ಶಿಲ್ಪಿಗಳು ಎರಡು ವರ್ಷಗಳು ಕೆಲಸ ಮಾಡಿದ್ದಾರೆ. ಇದು ದೇಶದಲ್ಲೇ ಅತಿ ಎತ್ತರದ ನಂದಿ ಮೂರ್ತಿಯಾಗಿದೆ.

ರಾಮದುರ್ಗ ತಾಲೂಕಿನ ರಾಮೇಶ್ವರ ದೇವಸ್ಥಾನದ ಅಶೋಕವನದಲ್ಲಿ, ಮಾಜಿ ಶಾಸಕ ಅಶೋಕ ಪಟ್ಟಣ ಅವರ ಪರಿಶ್ರಮದ ಫಲ, ವಿಶ್ವದಲ್ಲೇ ಅತೀ ಎತ್ತರದ ನಂದಿ ವಿಗ್ರಹ ನಿರ್ಮಾಣ ಆಗಿದೆ. ಇದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸಾಂಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ನೆರವೆರಿಸಲಿದ್ದಾರೆ.

- Advertisement -

ಕೀರ್ತನ ಕೇಸರಿ ಗುರುನಾಥ ಶಾಸ್ತ್ರಿಗಳಿಂದ ಅಧ್ಯಾತ್ಮಕ ಪ್ರವಚನ ಕಾರ್ಯಕ್ರಮ ಜರುಗಲಿದೆ.ಈ ಎಲ್ಲ ಕಾರ್ಯಕ್ರಮಗಳಲ್ಲಿ ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಅಧ್ಯಕ್ಷರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರು ಮಾತನಾಡಿ ಇದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮಗಳ ಭಕ್ತರು ಆಗಮಿಸಿ ಶಿವನ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ವರದಿಗಾರರು :ಶ್ರೀಕಾಂತ್ ಪೂಜಾರ್ ರಾಮದುರ್ಗ

Join Whatsapp