Home ಟಾಪ್ ಸುದ್ದಿಗಳು ಶಿವಲಿಂಗ ಇದೆಯೆನ್ನಲಾದ ಸ್ಥಳದಲ್ಲಿ ಮುಸ್ಲಿಮರ ನಮಾಝಿಗೆ ತೊಂದರೆಯಾಗಬಾರದು : ಸುಪ್ರೀಮ್ ಕೋರ್ಟ್ ಮಹತ್ವದ ಆದೇಶ

ಶಿವಲಿಂಗ ಇದೆಯೆನ್ನಲಾದ ಸ್ಥಳದಲ್ಲಿ ಮುಸ್ಲಿಮರ ನಮಾಝಿಗೆ ತೊಂದರೆಯಾಗಬಾರದು : ಸುಪ್ರೀಮ್ ಕೋರ್ಟ್ ಮಹತ್ವದ ಆದೇಶ

ಅಲಹಾಬಾದ್: ವಿವಾದ ಮಾಡಲಾದ ಜ್ಞಾನವಾಪಿ ಮಸೀದಿಯ ಕೊಳದಲ್ಲಿ ಶಿವಲಿಂಗ ಎನ್ನಲಾದ ಕಲ್ಲೊಂದು ಪತ್ತೆಯಾಗಿದ್ದರ ಹಿನ್ನಲೆಯಲ್ಲಿ ಮುಸ್ಲಿಮರಿಗೆ ಮಸೀದಿ ಪ್ರವೇಶ ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್  ಆದೇಶಿಸಿದೆ.

ಪತ್ತೆಯಾದ ವಸ್ತು ಮತ್ತು ಸ್ಥಳಗಳ ಸಂರಕ್ಷಣೆಯೊಂದಿಗೆ ಮುಸ್ಲಿಮರಿಗೆ ನಮಾಝ್ ಮತ್ತಿತರ ಆರಾಧನೆಗೆ ಅವಕಾಶ ನೀಡಲಾಗುತ್ತದೆ. ಮಸೀದಿ ಪ್ರವೇಶಿಸಲು ಮುಸ್ಲಿಮರಿಗೆ ಯಾವುದೇ ತಡೆಯಿಲ್ಲ ಎಂದು ನ್ಯಾಯಾಲಯ ವಿಧಿಸಿದ್ದು , ಮುಂದಿನ ವಿಚಾರವನ್ನು 19 ನೇ ತಾರೀಖಿಗೆ ಮುಂದೂಡಿದೆ.

ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ನಿಲ್ಲಿಸಬೇಕೆಂದು ವಾರಣಾಸಿಯ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ನಿಖರವಾಗಿ ಎಲ್ಲಿ ಪತ್ತೆಯಾಗಿದೆ ಎಂದು ವಾರಣಾಸಿ ಜಿಲ್ಲಾಡಳಿತವನ್ನು ಪ್ರಶ್ನಿಸಿದೆ.

►ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮೂರು ನಿರ್ದೇಶನಗಳು

1. ಮೇ 19 ರಂದು ಮುಂದಿನ ವಿಚಾರಣೆ

2. ಶಿವ ಲಿಂಗವನ್ನು ರಕ್ಷಿಸಲಾಗಿದೆ ಎಂದು ಹೇಳಲಾಗುವ ಸ್ಥಳ ಸಂರಕ್ಷಣೆ

3. ಈ ಆದೇಶವು ನಮಾಜ್ ಮಾಡುವ ಮತ್ತು ಧಾರ್ಮಿಕ ಆಚರಣೆಗಳನ್ನು ಮಾಡುವ ಮುಸ್ಲಿಮರ ಹಕ್ಕುಗಳನ್ನು ನಿರ್ಬಂಧಿಸುವುದಿಲ್ಲ

Join Whatsapp
Exit mobile version