Home ಟಾಪ್ ಸುದ್ದಿಗಳು ಉದ್ಯಾನವನದಲ್ಲಿ ನಮಾಝ್: ಗಂಗಾ ಜಲ ಚಿಮುಕಿಸಿ ವಿಎಚ್ ಪಿಯಿಂದ ಶುದ್ಧೀಕರಣ

ಉದ್ಯಾನವನದಲ್ಲಿ ನಮಾಝ್: ಗಂಗಾ ಜಲ ಚಿಮುಕಿಸಿ ವಿಎಚ್ ಪಿಯಿಂದ ಶುದ್ಧೀಕರಣ

ಅಹ್ಮದಾಬಾದ್: ಇಲ್ಲಿನ ವಸ್ತ್ರಾಪುರ ಪ್ರದೇಶದ ಸರೋವರ ಉದ್ಯಾನದಲ್ಲಿ ಕೆಲವು ಮುಸ್ಲಿಮರು ‘ನಮಾಜ್’ ಮಾಡಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಸದಸ್ಯರು “ಶುದ್ಧೀಕರಣ’ ವಿಧಿ ವಿಧಾನವನ್ನು ನಡೆಸಿದ್ದಾರೆ ಎಂದು ವಿಎಚ್ ಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ಬಗ್ಗೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ ಎಂದು ವಸ್ತ್ರಾಪುರ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ ಖಂಬ್ಲಾ ತಿಳಿಸಿದ್ದಾರೆ.
ನವೆಂಬರ್ 15 ರಂದು ನಡೆದ ಶುದ್ಧೀಕರಣ ಘಟನೆಯ ಬಗ್ಗೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು. ಕೆಲವು ದಿನಗಳ ಹಿಂದೆ, ನಗರದ ಜನಪ್ರಿಯ ತಾಣವಾಗಿರುವ ವಸ್ತ್ರಾಪುರ ಸರೋವರವ ಉದ್ಯಾನದಲ್ಲಿ ನಾಲ್ವರು ಮುಸ್ಲಿಂ ಪುರುಷರು ಮತ್ತು ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ನಮಾಜ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಸರೋವರದ ಬಳಿಯ ಬಹುಮಹಡಿ ಕಟ್ಟಡದ ನಿವಾಸಿ ವೀಡಿಯೊವನ್ನು ಚಿತ್ರೀಕರಿಸಿರಬಹುದು ಎಂದು ಅಂದಾಜಿಸಲಾಗಿದೆ.
“ಸೋಮವಾರ ಸಂಜೆ, ಕೆಲವು ವಿಎಚ್ ಪಿ ಕಾರ್ಯಕರ್ತರು ಉದ್ಯಾನವನಕ್ಕೆ ಆಗಮಿಸಿ “ಶುದ್ಧೀಕರಣ” ಪ್ರಕ್ರಿಯೆ ನಡೆಸಿದರು. ಮಂತ್ರ ಪಠಿಸಿ ‘ಗಂಗಾ ಜಲ’ವನ್ನು ಚಿಮುಕಿಸಿದರು. ಒಂದು ಸಾಮಾನ್ಯ ನಮಾಜ್ ಅಂತಿಮವಾಗಿ ಆ ಜಾಗದ ಮೇಲೆ ಹಕ್ಕು ಸಾಧಿಸಲು ಕಾರಣವಾಗುತ್ತದೆ” ಎಂದು ಗುಜರಾತ್ ವಿಎಚ್ ಪಿ ಕಾರ್ಯದರ್ಶಿ ಅಶೋಕ್ ರಾವಲ್ ಹೇಳಿದರು.


ಸರೋವರದ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಸಂಬಂಧಿಕರನ್ನು ನೋಡಲು ಬಂದವರು, ಸಮೀಪದಲ್ಲಿ ಮಸೀದಿ ಇಲ್ಲದ್ದರಿಂದ ಇಲ್ಲಿ ನಮಾಝ್ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Join Whatsapp
Exit mobile version