Home ಟಾಪ್ ಸುದ್ದಿಗಳು ಹೆಡ್ಗೆವಾರ್ ಭಾಷಣ ಸೇರ್ಪಡೆ ಪಠ್ಯ ಪುಸ್ತಕ ಸರಿಯಿಲ್ಲ ಎನ್ನುವವರು ದೇಶವಿರೋಧಿಗಳು: ನಳಿನ್ ಕುಮಾರ್ ಕಟೀಲ್

ಹೆಡ್ಗೆವಾರ್ ಭಾಷಣ ಸೇರ್ಪಡೆ ಪಠ್ಯ ಪುಸ್ತಕ ಸರಿಯಿಲ್ಲ ಎನ್ನುವವರು ದೇಶವಿರೋಧಿಗಳು: ನಳಿನ್ ಕುಮಾರ್ ಕಟೀಲ್

ಮೈಸೂರು: ರಾಜ್ಯದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಪರೀಷ್ಕೃತ ಪಠ್ಯಕ್ರಮ ಸರಿಯಿಲ್ಲ ಎನ್ನುವವರು, ವಿರೋಧಿಸುವವರು ರಾಷ್ಟ್ರ ವಿರೋಧಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಪಠ್ಯಕ್ರಮದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ರಾಷ್ಟ್ರ ವಿರೋಧಿ ಧೋರಣೆಯಾಗಿದೆ ಎಂಬ ವಿಪಕ್ಷಗಳ ಆರೋಪದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆದರ್ಶ ವ್ಯಕ್ತಿಯ ಭಾಷಣವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಮಕ್ಕಳ ಕಲಿಕಾಸ್ನೇಹಿ ಅಂಶಗಳಿವೆಯೇ ಹೊರತು ವಿಪಕ್ಷಗಳು ಹೇಳಿದಂತೆ ಯಾವುದೇ ಋಣಾತ್ಮಕ ಪರಿಣಾಮ ಬೀರುವ ಅಂಶಗಳಿಲ್ಲ. ಹೆಡ್ಗೆವಾರ್ ಭಾಷಣ ಸೇರ್ಪಡೆಯಲ್ಲಿ ಯಾವುದೇ ತಪ್ಪಿಲ್ಲ.ಇದನ್ನು ವಿರೋಧಿಸುವವರು ರಾಷ್ಟ್ರ ವಿರೋಧಿಗಳು ಎಂದು ತಿರುಗೇಟು ನೀಡಿದರು.

ಹೆಗ್ಗಡೆವಾರ್ ಭಾಷಣಕ್ಕೆ ವಿರೋಧ ವ್ಯಕ್ತಪಡಿಸುವವರು ಭಾರತ ಮಾತೆಯ ಆರಾಧನೆಯನ್ನೂ ರಾಷ್ಟ್ರ ವಿರೋಧಿ ಎನ್ನುತ್ತಾರೆಯೇ? ಪಠ್ಯ ಯಾರು ರಚಿಸಿದ್ದಾರೆ ಎನ್ನುವುದಕ್ಕಿಂತ ಅದರೊಳಗಿನ ಆದರ್ಶ ವಿಚಾರವೇ ಪ್ರಮುಖ ಅಂಶವಾಗುತ್ತದೆ. ವಿಷಯವನ್ನು ಸರಿಯಾಗಿ ಅರಿತುಕೊಳ್ಳದೆ ಮಾತನಾಡುವವರು ರಾಷ್ಟ್ರವಿರೋಧಿಗಳು ಎನ್ನದೇ ವಿಧಿಯಿಲ್ಲ ಎಂದ್ದಿದ್ದಾರೆ.

Join Whatsapp
Exit mobile version