Home ರಾಷ್ಟ್ರೀಯ ಬ್ರಿಟನ್ | ‘ನಾಗಾ ತಲೆಬುರುಡೆ’ ಹರಾಜು ನಿಲ್ಲಿಸಲು ಸಹಾಯ ಮಾಡಿ: ಕೇಂದ್ರಕ್ಕೆ ನಾಗಾಲ್ಯಾಂಡ್ ಸಿಎಂ ಮನವಿ

ಬ್ರಿಟನ್ | ‘ನಾಗಾ ತಲೆಬುರುಡೆ’ ಹರಾಜು ನಿಲ್ಲಿಸಲು ಸಹಾಯ ಮಾಡಿ: ಕೇಂದ್ರಕ್ಕೆ ನಾಗಾಲ್ಯಾಂಡ್ ಸಿಎಂ ಮನವಿ

ಗುವಾಹತಿ: 19ನೇ ಶತಮಾನದಷ್ಟು ಹಳೆಯ ಕೋಡು ಹೊಂದಿರುವ ‘ನಾಗಾ ಮನುಷ್ಯನ ತಲೆಬುರುಡೆ’ ಹರಾಜು ಮಾಡಲು ಮುಂದಾಗಿರುವ ಬ್ರಿಟನ್ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫು ರಿಯೊ, ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರನ್ನು ಆಗ್ರಹಿಸಿದ್ದಾರೆ.


ಟೆಟ್ಸ್ ವರ್ತ್ ಮೂಲದ ಸ್ವಾನ್ ಫೈನ್ ಆರ್ಟ್ಸ್ ವೆಬ್ ಸೈಟ್ ಬುಧವಾರ ಹರಾಜಿಗಿರುವ ವಸ್ತುಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ಮಂಗಳವಾರ ಸಂಜೆ ಇದನ್ನು ಪಟ್ಟಿಯಿಂದ ಕಿತ್ತುಹಾಕಲಾಗಿದೆ.
ಮಾನವ ಅವಶೇಷಗಳನ್ನು ಹರಾಜು ಹಾಕುವುದು ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡುತ್ತದೆ ಮತ್ತು ಇದು ಅಮಾನವೀಯತೆಯ ಕೃತ್ಯವಾಗಿದೆ ಮತ್ತು ನಾಗಾ ಜನರ ಮೇಲಿನ ನಿರಂತರ ವಸಾಹತುಶಾಹಿ ಹಿಂಸಾಚಾರ ಎಂದು ಪರಿಗಣಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ನೆಫಿಯು ರಿಯೊ ತಿಳಿಸಿದ್ದಾರೆ.


“ಯುಕೆಯಲ್ಲಿ ನಾಗಾ ಮಾನವ ಅವಶೇಷಗಳ ಪ್ರಸ್ತಾಪಿತ ಹರಾಜಿನ ಸುದ್ದಿಯನ್ನು ಎಲ್ಲಾ ವರ್ಗಗಳು ನಕಾರಾತ್ಮಕ ರೀತಿಯಲ್ಲಿ ಸ್ವೀಕರಿಸಿವೆ ಏಕೆಂದರೆ ಇದು ನಮ್ಮ ಜನರಿಗೆ ಹೆಚ್ಚು ಭಾವನಾತ್ಮಕ ಮತ್ತು ಪವಿತ್ರ ವಿಷಯವಾಗಿದೆ. ನಮ್ಮ ಜನರು ಅತ್ಯಧಿಕವಾಗಿ ನೀಡುವುದು ನಮ್ಮ ಜನರ ಸಾಂಪ್ರದಾಯಿಕ ಪದ್ಧತಿಯಾಗಿದೆ. ನಿಧನರಾದವರ ಅವಶೇಷಗಳಿಗೆ ಗೌರವ ಮತ್ತು ಗೌರವ,” ನೈಫಿಯು ರಿಯೊ ಹೇಳಿದರು.


ಈ ಹರಾಜನ್ನು ಸ್ಥಗಿತಗೊಳಿಸಲಾಗಿದೆಯೇ ಅಥವಾ ವೆಬ್ ಸೈಟ್ ನಿಂದ ತಲೆಬುರುಡೆಯನ್ನು ಮಾತ್ರ ಕಿತ್ತುಹಾಕಲಾಗಿದೆಯೇ ಎನ್ನುವ ಅಂಶ ದೃಢಪಟ್ಟಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಪಿಟ್ ರಿವರ್ಸ್ ಮ್ಯೂಸಿಯಂ ಈ ಬಗ್ಗೆ ಎಕ್ಸ್ ನಲ್ಲಿ ಹೇಳಿಕೆ ನೀಡಿ, “ನಾಗಾ ಪೂರ್ವಜರ ಈ ಪಳೆಯುಳಿಕೆಯನ್ನು ಮಾರಾಟದಿಂದ ಹಿಂದಕ್ಕೆ ಪಡೆಯಲಾಗಿದೆ” ಎಂದು ಸ್ಪಷ್ಟಪಡಿಸಿದೆ.


ಕ್ಯಾಲಿಫೋರ್ನಿಯಾ ಮೂಲದ ನಾಗಾ ಪ್ರೊಫೆಸರ್ ಹಾಗೂ ಮಾನವಶಾಸ್ತ್ರ ತಜ್ಞ ಡಾಲಿ ಕಿಕಾನ್ ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ, ಈ ಅಪರೂಪದ ತಲೆಬುರುಡೆ 21ನೇ ಶತಮಾನದ ಸಂಗ್ರಹಯೋಗ್ಯ ಪಳೆಯುಳಿಕೆ ಎಂದಿದ್ದರು.

Join Whatsapp
Exit mobile version