Home ಟಾಪ್ ಸುದ್ದಿಗಳು ಅಜಿತ್ ಪವಾರ್ ಬಣಕ್ಕೆ ಬೆಂಬಲ ಘೋಷಿಸಿದ ನಾಗಲ್ಯಾಂಡ್ ನ ಎಲ್ಲಾ 7 NCP ಶಾಸಕರು

ಅಜಿತ್ ಪವಾರ್ ಬಣಕ್ಕೆ ಬೆಂಬಲ ಘೋಷಿಸಿದ ನಾಗಲ್ಯಾಂಡ್ ನ ಎಲ್ಲಾ 7 NCP ಶಾಸಕರು

ಹೊಸದಿಲ್ಲಿ: ನಾಗಾಲ್ಯಾಂಡ್ನ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಎಲ್ಲಾ ಏಳು ಶಾಸಕರು ಅಜಿತ್ ಪವಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಚಿಕ್ಕಪ್ಪ ಶರದ್ ಪವಾರ್ಗೆ ಭಾರಿ ಹಿನ್ನಡೆಯಾಗಿದೆ.

ಈಶಾನ್ಯ ರಾಜ್ಯದ ಏಳು NCP ಶಾಸಕರು ಗುರುವಾರ ಹೇಳಿಕೆಯಲ್ಲಿ ನಾಗಾಲ್ಯಾಂಡ್ ಎನ್ಸಿಪಿ ಕಚೇರಿಯಲ್ಲಿರುವ ಎಲ್ಲಾ ಪಕ್ಷದ ಕಾರ್ಯಕರ್ತರು ಅಜಿತ್ ಪವಾರ್ ಅವರನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರ್ಕಾರಕ್ಕೆ ಇತರ ಎಂಟು ಶಾಸಕರೊಂದಿಗೆ ಬೆಂಬಲ ಸೂಚಿಸಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅದು ಶರದ್ ಪವಾರ್ ಅವರಿಗೆ ದೊಡ್ಡ ಹಿನ್ನಡೆ ಎಂಬಂತೆ ಪಕ್ಷ ಒಡೆಯಲು ಕಾರಣವಾಗಿದೆ. ಈಗ ಈಶಾನ್ಯದಲ್ಲೂ ಬಲ ಕಳೆದುಕೊಳ್ಳುವಂತಾಗಿದೆ.

Join Whatsapp
Exit mobile version