ಮೈಸೂರು: ಹುಣಸೂರು ತಾಲೂಕಿನ ಪಕ್ಷಿರಾಜಪುರದ ನಿವಾಸಿ, ಹಕ್ಕಿಪಿಕ್ಕಿ ಜನಾಂಗದ ಮಹಿಳೆ ಸುಡಾನ್ ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ನಂದಿನಿ ಮೃತರು. ನಂದಿನಿ ಅವರು ಸುಡಾನ್ ಗೆ ವ್ಯಾಪಾರಕ್ಕಾಗಿ ತೆರಳಿದ್ದರು. ನಂದಿನಿ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪಕ್ಷಿರಾಜಪುರದಲ್ಲಿ ನಂದಿನಿ ಪತಿ ಹಾಗೂ ಮಕ್ಕಳು ವಾಸವಾಗಿದ್ದು, ಮೃತದೇಹನ್ನು ದೇಶಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸುಡಾನ್ ನಲ್ಲಿರುವ ಭಾರತದ ರಾಯಭಾರಿ ಜೊತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮಾತನಾಡಿದ್ದು, ನಂದಿನಿ ಶವ ಏ.17 ರಂದು ಹುಣಸೂರಿಗೆ ಕರೆತರುವ ಸಾಧ್ಯತೆ ಇದೆ.