Home ರಾಜ್ಯ ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ: ದರ ಪಟ್ಟಿ ಇಲ್ಲಿದೆ

ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ: ದರ ಪಟ್ಟಿ ಇಲ್ಲಿದೆ

ಮೈಸೂರು: ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ ಮಾಡಲಾಗಿದೆ.

ಟಿಕೆಟ್​ ದರದ ಮೇಲೆ ಜಿಎಸ್​ಟಿ ಸೇರಿಸಿ ಹೆಚ್ಚಿಸಲಾಗಿದೆ. ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಬರೋಬ್ಬರಿ 900 ರೂ. ಹೆಚ್ಚಳ ಮಾಡಿದ್ದರೆ, ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕ 120 ರೂಪಾಯಿ ಏರಿಕೆ ಮಾಡಲಾಗಿದೆ.

ಇಂದಿನಿಂದ (ಅಕ್ಟೋಬರ್ 25) ಪರಿಷ್ಕೃತ ದರ ಜಾರಿಗೆ ಬರಲಿದೆ. ಇನ್ನು ಒಳ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ ಹಾಗೂ ಶೌಚಾಲಯ ಸೇವಾ ಶುಲ್ಕವನ್ನ ರದ್ದುಪಡಿಸಲಾಗಿದೆ. ಈಚೆಗೆ ನಡೆದ ಅರಮನೆ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

10ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂಪಾಯಿ ಪ್ರವೇಶ ಶುಲ್ಕ ಫಿಕ್ಸ್ ಮಾಡಿದ್ದರೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂ. ನಿಗದಿಪಡಿಸಿದೆ.

ನಾಡಹಬ್ಬ ದಸರಾ-2024ರ ಸಂಬಂಧ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ, ಮೈಸೂರು ಅರಮನೆ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಪುನರಾರಂಭವಾಗಿದೆ ಎಂದು ಸಹ ಉಪ ನಿರ್ದೇಶಕರು ತಿಳಿಸಿದ್ದಾರೆ.

Join Whatsapp
Exit mobile version