Home ಟಾಪ್ ಸುದ್ದಿಗಳು ಭ್ರಷ್ಟಾಚಾರ ಪ್ರಕರಣ: ಮ್ಯಾನ್ಮಾರ್ ನ ಆಂಗ್ ಸಾನ್ ಸೂಕಿಗೆ 5 ವರ್ಷ ಜೈಲು ಶಿಕ್ಷೆ

ಭ್ರಷ್ಟಾಚಾರ ಪ್ರಕರಣ: ಮ್ಯಾನ್ಮಾರ್ ನ ಆಂಗ್ ಸಾನ್ ಸೂಕಿಗೆ 5 ವರ್ಷ ಜೈಲು ಶಿಕ್ಷೆ

ಬ್ಯಾಂಕಾಕ್: ಮ್ಯಾನ್ಮಾರ್  ನ ಮಾಜಿ ನಾಯಕಿ, ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿದೆ.

2021ರ ಫೆಬ್ರವರಿಯಲ್ಲಿ ರಾಜಕೀಯ ಸಹೋದ್ಯೋಗಿಯೊಬ್ಬರಿಂದ ಚಿನ್ನ ಮತ್ತು ಲಕ್ಷಾಂತರ ಡಾಲರ್ ಹಣ ಸ್ವೀಕರಿಸಿದ್ದಾರೆ ಎಂದು ಸೂಕಿ  ವಿರುದ್ಧ  ಆರೋಪ ಕೇಳಿಬಂದಿತ್ತು. ವಿಚಾರಣೆಯಲ್ಲಿ ತನ್ನ ಮೇಲಿನ ಭ್ರಷ್ಟಾಚಾರ ಆರೋಪವನ್ನು ಸೂಕಿ ತಳ್ಳಿ ಹಾಕಿದ್ದರು. ಮ್ಯಾನ್ಮಾರ್ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮ್ಯಾನ್ಮಾರ್ ಸೇನೆಯು ಸೂಕಿ ಬೆಂಬಲಿತ ಸರ್ಕಾರವನ್ನು ಪದಚ್ಯುತಗೊಳಿಸಿ, ತನ್ನ ವಶಕ್ಕೆ ಆಡಳಿತ ಪಡೆದುಕೊಂಡಿದ್ದು, 76 ವರ್ಷದ ಸೂಕಿಯನ್ನು ರಾಜಕೀಯದಿಂದ ದೂರ ಇರಿಸಲು ಅಲ್ಲಿನ ಮಿಲಿಟರಿ ಆಡಳಿತ ಉದ್ದೇಶಿಸಿದೆ.

Join Whatsapp
Exit mobile version