Home ಟಾಪ್ ಸುದ್ದಿಗಳು ಮ್ಯಾನ್ಮಾರ್: ದೇಶದ್ರೋಹ ಪ್ರಕರಣದಲ್ಲಿ ಅಮೆರಿಕನ್ ಪತ್ರಕರ್ತನ ಬಂಧನ

ಮ್ಯಾನ್ಮಾರ್: ದೇಶದ್ರೋಹ ಪ್ರಕರಣದಲ್ಲಿ ಅಮೆರಿಕನ್ ಪತ್ರಕರ್ತನ ಬಂಧನ

ಮಾಲ್ಡೀವ್ಸ್: ಭಯೋತ್ಪಾದನೆ, ದೇಶದ್ರೋಹ ಆರೋಪದಲ್ಲಿ ಮ್ಯಾನ್ಮಾರ್ ಸರ್ಕಾರ ಅಮೆರಿಕನ್ ಮೂಲದ ಪತ್ರಕರ್ತನನ್ನು ಕಳೆದ ಮೇ ನಲ್ಲಿ ಬಂಧಿಸಿತ್ತು. ಆರೋಪ ಸಾಭೀತಾದರೆ ಗರಿಷ್ಠ ಜೀವಾವಧಿ ಶಿಕ್ಷೆಗೊಳಪಡುವ ಸಾಧ್ಯತೆಯಿದೆ ಎಂದು ವಕೀಲರು ತಿಳಿಸಿದ್ದಾರೆ.

ಅಮೆರಿಕನ್ ಮೂಲದ ಡ್ಯಾನಿ ಫೆನ್ ಸ್ಟೆರ್ ಎಂಬಾತನೇ ಬಂಧಿತ ಪತ್ರಕರ್ತನಾಗಿದ್ದು, ಕಳೆದ ಒಂದು ವರ್ಷಗಳಿಂದ ಸ್ಥಳೀಯ ಮಾಧ್ಯಮವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಕಳೆದ ಮೇ ತಿಂಗಳಲ್ಲಿ ತನ್ನ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಆತನನ್ನು ಭಯೋತ್ಪಾದನೆ, ದೇಶದ್ರೋಹ ಪ್ರಕರಣದಡಿ ಬಂಧಿಸಲಾಗಿದೆ. ಪ್ರಕರಣ ವಿಚಾರಣೆಯು ನವೆಂಬರ್ 16 ರಿಂದ ಆರಂಭವಾಗಲಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ಪ್ರಸಕ್ತ ಪತ್ರಕರ್ತ ಡ್ಯಾನಿ ಅವರನ್ನು ಕಾನೂನುಬಾಹಿರ ಸಂಘಟನೆಗಳೊಂದಿಗೆ ನಂಟು ಮತ್ತು ವಲಸೆ ಕಾನೂನಿನ ಉಲ್ಲಂಘನೆಯ ಆರೋಪದಲ್ಲಿ ಯಾಂಗೂನ್ ಜೈಲಿನಲ್ಲಿರಿಸಲಾಗಿದೆ.

Join Whatsapp
Exit mobile version