Home ಟಾಪ್ ಸುದ್ದಿಗಳು “ನನ್ನ ಆಯ್ಕೆಯನ್ನು ಮುಕ್ತವಾಗಿಟ್ಟಿದ್ದೇನೆ”; ಕಾಂಗ್ರೆಸ್ ನಡೆಗೆ ಬೇಸತ್ತು ಅಹ್ಮದ್ ಪಟೇಲ್ ಪುತ್ರನ ಟ್ವೀಟ್

“ನನ್ನ ಆಯ್ಕೆಯನ್ನು ಮುಕ್ತವಾಗಿಟ್ಟಿದ್ದೇನೆ”; ಕಾಂಗ್ರೆಸ್ ನಡೆಗೆ ಬೇಸತ್ತು ಅಹ್ಮದ್ ಪಟೇಲ್ ಪುತ್ರನ ಟ್ವೀಟ್

ದೆಹಲಿ: ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವರಿಷ್ಠರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

“ಕಾದು ಸುಸ್ತಾಗಿದ್ದೇನೆ. ಹಿರಿಯರಿಂದ ಯಾವುದೇ ಪ್ರೋತ್ಸಾಹವಿಲ್ಲ. ನನ್ನ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡಿದ್ದೇನೆ” ಎಂದು ಫೈಸಲ್ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

https://twitter.com/mfaisalpatel/status/1511222961771999232?s=20&t=me8U17jTaAz60lh3R10vBA

ಈ ಹಿನ್ನೆಲೆಯಲ್ಲಿ ಫೈಸಲ್ ಅವರನ್ನು ಸಂಪರ್ಕಿಸಿದಾಗ, ಅವರು ಹೆಚ್ಚೇನೂ ಹೇಳಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆಯ ನಡೆಯಲಿದೆ.

Join Whatsapp
Exit mobile version