Home ಟಾಪ್ ಸುದ್ದಿಗಳು ನನಗಿಂತ ಕಿರಿಯರಿಗೆ ವರ್ಷಗಳ ಹಿಂದೆಯೇ ಪದ್ಮಶ್ರೀ ನೀಡಲಾಗಿದೆ, ಹಾಗಾಗಿ ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸುತ್ತಿದ್ದೇನೆ- ಅನಿಂದೋ ಚಟರ್ಜಿ

ನನಗಿಂತ ಕಿರಿಯರಿಗೆ ವರ್ಷಗಳ ಹಿಂದೆಯೇ ಪದ್ಮಶ್ರೀ ನೀಡಲಾಗಿದೆ, ಹಾಗಾಗಿ ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸುತ್ತಿದ್ದೇನೆ- ಅನಿಂದೋ ಚಟರ್ಜಿ

ಕೋಲ್ಕತಾ; ಗಣರಾಜ್ಯೋತ್ಸವ ಮುನ್ನಾ ದಿನ ಘೋಷಿಸಲಾಗಿರುವ ಪದ್ಮ ಪ್ರಶಸ್ತಿಯನ್ನು ತಿರಸ್ಕರಿಸುತ್ತಿರುವವ ಸಂಖ್ಯೆ ಮುಂದುವರಿದಿದೆ.


ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಮ್ಯುನಿಸ್ಟ್ ನಾಯಕ ಬುದ್ಧದೇವ ಭಟ್ಟಾಚಾರ್ಯ [77] ಹಾಗೂ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ [90] ಬೆನ್ನಲ್ಲೇ, ಖ್ಯಾತ ತಬಲ ವಾದಕ ಅನಿಂದೋ ಚಟರ್ಜಿ ಅವರು ತಮಗೆ ದೊರೆತ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.


“ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವಂತೆ ಕೋರಿ ನನಗೆ ದೆಹಲಿಯಿಂದ ಅಧಿಕಾರಿಗಳು ಕರೆ ಮಾಡಿದ್ದರು. ಆದರೆ ವಿನಮೃತೆಯಿಂದಲೇ ನಾನು ಅಸಮ್ಮತಿ ಸೂಚಿಸಿದ್ದೇನೆ. 10 ವರ್ಷಗಳ ಹಿಂದೆ ಆಗಿದ್ದರೆ ನಾನು ಸಂತೋಷದಿಂದ ಒಪ್ಪಿಗೆ ಸೂಚಿಸುತ್ತಿದ್ದೆ. ಆದರೆ ಇದೀಗ ನಾನು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಬೇಕಾದ ಸಮಯವು ಕಳೆದು ಹೋಗಿದೆ. ನನ್ನ ಅನೇಕ ಸಮಕಾಲೀನರು, ಹಾಗೂ ಕಿರಿಯರು ವರ್ಷಗಳ ಮೊದಲೇ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಹೀಗಾಗಿ ನನ್ನ ಸಮಯವು ಕಳೆದು ಹೋಗಿದೆ ಎಂದು, 2002ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಚಟರ್ಜಿ ಪ್ರತಿಕ್ರಿಯಿಸಿದ್ದಾರೆ.


ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜರಾದ ಪಂಡಿತ್ ರವಿಶಂಕರ್, ಉಸ್ತಾದ್ ಅಮ್ಜದ್ ಅಲಿ ಖಾನ್ ಹಾಗೂ ಉಸ್ತಾದ್ ಅಲಿ ಅಕ್ಬರ್ ಅವರ ಜೊತೆಯಲ್ಲಿ ಅನಿಂದೋ ಚಟ ಸಹ ತಬಲ ವಾದಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

2022ರ ಸಾಲಿನಲ್ಲಿ ನಾಲ್ವರು ಸಾಧಕರಿಗೆ ಪದ್ಮ ವಿಭೂಷಣ, 17 ಸಾಧಕರಿಗೆ ಪದ್ಮಭೂಷಣ ಹಾಗೂ 107 ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಐವರು ಕನ್ನಡಿಗರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Join Whatsapp
Exit mobile version