Home ಟಾಪ್ ಸುದ್ದಿಗಳು “ನನ್ನ ಅಜ್ಜನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೂ ಅವಕಾಶವಿರಲಿಲ್ಲ” ಆಕ್ಸ್‌ ಫರ್ಡ್‌ ಪದವೀಧರೆಯ ಪೋಸ್ಟ್ ವೈರಲ್

“ನನ್ನ ಅಜ್ಜನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೂ ಅವಕಾಶವಿರಲಿಲ್ಲ” ಆಕ್ಸ್‌ ಫರ್ಡ್‌ ಪದವೀಧರೆಯ ಪೋಸ್ಟ್ ವೈರಲ್

ಮಹಾರಾಷ್ಟ್ರ: ಜೂಹಿ ಕೋರೆ ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಶಿಕ್ಷಣವನ್ನು ಪಡೆಯುವಲ್ಲಿ ಸ್ವಂತ ಹೋರಾಟಗಳನ್ನು ವಿವರಿಸಿದ್ದಾರೆ ಮತ್ತು ಅಜ್ಜನನನ್ನು ಸ್ಮರಿಸಿದ್ದಾರೆ. ಅವರ ಕಠಿಣ ಪರಿಶ್ರಮವು ತನ್ನ ಕನಸನ್ನು ಯಶಸ್ವಿಯಾಗಲು ಮತ್ತು ನನಸಾಗಿಸಲು ಹೇಗೆ ದಾರಿ ಮಾಡಿಕೊಟ್ಟಿತು ಎಂದು ವಿವರಿಸಿದ್ದಾರೆ. ಮಹಾರಾಷ್ಟ್ರದ ಕೆಳಜಾತಿ ಕುಟುಂಬಕ್ಕೆ ಸೇರಿದ ತನ್ನ ಅಜ್ಜ ತನ್ನ ಬಾಲ್ಯದುದ್ದಕ್ಕೂ ಓದುವ ಹಕ್ಕಿಗಾಗಿ ಹೋರಾಡಬೇಕಾಯಿತು ಎಂದು ಜೂಹಿ ಹೇಳಿದ್ದಾರೆ. ಅಂದು ಸ್ವತಂತ್ರ ಜೀವನವನ್ನು ನಡೆಸಲು ಅವಕಾಶವಿರಲಿಲ್ಲ ಎಂದು ಅವರು ಬರೆದಿದ್ದಾರೆ.
ಅವರ ಪೋಸ್ಟ್ ವೈರಲ್ ಆಗಿದೆ.

ಶಾಲಾ ವಯಸ್ಸಿನ ಹುಡುಗನಾಗಿದ್ದರೂ ನನ್ನ ಅಜ್ಜನ ಕುಟುಂಬವು ಅವರನ್ನು ಶಾಲೆಗೆ ಕಳಿಸಲು ಬಯಸಲಿಲ್ಲ. ಮನೆಯಲ್ಲಿದ್ದ ನಾಲ್ವರಲ್ಲಿ ಹಿರಿಯನಾಗಿ, ಅವರು ಜಮೀನಿನಲ್ಲಿ ಕೆಲಸ ಮಾಡಬೇಕಾಗಿತ್ತು. ಆತ ಕೆಲಸ ಮಾಡಿದರೆ ಹೊಟ್ಟೆ ತುಂಬಬಹುದು ಎಂಬ ಲೆಕ್ಕಾಚಾರ ಇತ್ತು. ಅದಕ್ಕಿಂತಲೂ ಹೆಚ್ಚಾಗಿ ಇತರ ವಿದ್ಯಾರ್ಥಿಗಳು, ಶಿಕ್ಷಕರು ಹೇಗೆ ನಡೆಸಿಕೊಳ್ಳಬಹುದು ಎಂದು ಕುಟುಂಬದವರು ಹೆದರುತ್ತಿದ್ದರು ಎಂದು ಬರೆದಿದ್ದಾರೆ.

ಅಜ್ಜ ಬೆಳಿಗ್ಗೆ 3 ಗಂಟೆಯಿಂದ ಜಮೀನಿನಲ್ಲಿ ಕೆಲಸ ಮಾಡಿ, ಮಧ್ಯಾಹ್ನದ ನಂತರ ಶಾಲೆಗೆ ಹೋಗಬೇಕಾಗಿತ್ತು. ದುರದೃಷ್ಟವಶಾತ್, ಪ್ರತಿದಿನ ಸುಮಾರು 1.5 ಗಂಟೆಗಳ ಕಾಲ ನಡೆದು ಹೋಗುವ ಅವರಿಗೆ ಧರಿಸಲು ಉತ್ತಮ ಚಪ್ಪಲಿಯಿರಲಿಲ್ಲ. ಅಲ್ಲದೆ, ಆ ಚಿಕ್ಕ ಹುಡುಗನಿಗೆ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶವಿರಲಿಲ್ಲ. ಆದರೂ ಅವರು ಪರಿಶ್ರಮಪಟ್ಟರು ಎಂದು ಜೂಹಿ ವಿವರಿಸಿದ್ದಾರೆ.

Join Whatsapp
Exit mobile version