ಬೆಂಗಳೂರು: ನನ್ನ ತಂದೆ ರಾಷ್ಟ್ರೀಯ ವಾದಿ, ಅದನ್ನು ನಾನು ಪಾಲಿಸುತ್ತೇನೆ. ಆರ್ ಎಸ್ ಎಸ್ ಕೂಡ ರಾಷ್ಟ್ರೀಯತೆಯನ್ನೇ ಪ್ರತಿಪಾದಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಜಿ ಮುಖ್ಯಮತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಮುಖ್ಯಮತ್ರಿ ಮತ್ತು ಹಾಲಿ ಮುಖ್ಯಮತ್ರಿಗಳು ಟ್ವೀಟ್ ಗಳ ಮೂಲಕ ಸಮರ ಮುಂದುವರೆಸಿದ್ದು, ನನ್ನ ತಂದೆ ರಾಷ್ಟ್ರೀಯ ವಾದಿ, ಅದನ್ನು ನಾನು ಪಾಲಿಸುತ್ತೇನೆ. ಆರ್ ಎಸ್ಎಸ್ ಕೂಡ ರಾಷ್ಟ್ರೀಯತೆಯನ್ನೇ ಪ್ರತಿಪಾದಿಸುತ್ತದೆ. ಅದೇನೆ ಇರಲಿ ಸಿದ್ದರಾಮಯ್ಯ ಅವರೇ, ನೀವು ಜೀವನ ಪರ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದೀರಿ. ಈಗ ಒಂದು ಕುಟುಂಬದ ಹಿನ್ನೆಲೆ ಗಾಯಕರಾಗಿದ್ದೀರಿ, ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಮುಖ್ಯಮಂತ್ರಿ ಸಮರ್ಥಿಸಿದ್ದರು. ಈ ಬಗ್ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು.