‘ನನ್ನ ಹಿರಿಯರು ರಜಪೂತ ಹಿಂದೂಗಳಾಗಿದ್ದರು’: ಬಿಹಾರ ಸಚಿವ ಜಮಾ ಖಾನ್ ಹೇಳಿಕೆ

Prasthutha: July 10, 2021

ಬಿಹಾರ: ಹಿಂದೂ ರಜಪೂತ ಜನಾಂಗದಲ್ಲಿದ್ದ ನನ್ನ ಪೂರ್ವಜರು ಇಸ್ಲಾಮ್ ಧರ್ಮ ಸ್ವೀಕರಿಸಿದ್ದರು ಎಂದು ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್ ಹೇಳಿದ್ದಾರೆ.

ಬಲವಂತದ ಮತಾಂತರವನ್ನು ಟೀಕಿಸಿದ ಖಾನ್, ಈ ರೀತಿ ಮಾಡುವವರನ್ನು ಕಾನೂನು ಕ್ರಮಗಳಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಯಾರನ್ನೂ ಕೂಡ ಬಲವಂತದಿಂದ ಮತಾಂತರಗೊಳಿಸಬಾರದು. ಯಾರಾದರೂ ಸ್ವ ಇಚ್ಛೆಯಿಂದ ಮತಾಂತರಗೊಂಡರೆ ಅದು ತಪ್ಪಾಗಲಾರದು. ನನ್ನ ಪೂರ್ವಜರು ಇಸ್ಲಾಂಗೆ ಸ್ವ ಇಚ್ಛೆಯಿಂದ ಮತಾಂತರಗೊಂಡಿದ್ದರು. ತಮ್ಮ ಕುಟುಂಬದ ಕೆಲವರು ಇನ್ನೂ ಹಿಂದೂ ಧರ್ಮದಲ್ಲಿದ್ದು, ತಾನು ಅವರೊಂದಿಗೆ ಉತ್ತಮ ಸಂಬಂಧದಲ್ಲಿರುವುದಾಗಿ ಖಾನ್ ತಿಳಿಸಿದ್ದಾರೆ.

ಬಿಎಸ್ಪಿ ತೊರೆದು ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಸೇರಿದ್ದ ಜಮಾ ಖಾನ್, ಬಿಹಾರದಲ್ಲಿ ಜೆಡಿಯು ಸರ್ಕಾರದ ಏಕೈಕ ಮುಸ್ಲಿಂ ಸಚಿವರಾಗಿದ್ದಾರೆ.   

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ