Home ಟಾಪ್ ಸುದ್ದಿಗಳು ನನ್ನ ಮಕ್ಕಳು ಕ್ರಿಶ್ಚಿಯನ್; ನಾನು ಮತಾಂತರಗೊಂಡಿದ್ದೇನೆ: ಪವನ್ ಕಲ್ಯಾಣ್ ಹಳೆ ವಿಡಿಯೋ ವೈರಲ್

ನನ್ನ ಮಕ್ಕಳು ಕ್ರಿಶ್ಚಿಯನ್; ನಾನು ಮತಾಂತರಗೊಂಡಿದ್ದೇನೆ: ಪವನ್ ಕಲ್ಯಾಣ್ ಹಳೆ ವಿಡಿಯೋ ವೈರಲ್

►‘ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಸಾವಿರ ಬಾರಿ ಯೋಚಿಸಿ’ ಎಂದಿದ್ದ ಡಿಸಿಎಂ


ಹೈದರಾಬಾದ್: ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಕೆ ವಿಚಾರ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೂ ಆಗ್ರಹಿಸಿದ್ದಾರೆ.


ಈ ಮಧ್ಯೆ ಪವನ್ ಕಲ್ಯಾಣ್ ಅವರ ಹಿಂದಿನ ವಿಡಿಯೋವೊಂದು ವೈರಲ್ ಆಗುತ್ತಿದೆ.


ಮೊದಲೆಲ್ಲ ಜಾತ್ಯತೀತತೆ, ಮಾರ್ಕ್ಸ್ ವಾದ, ಕಾರ್ಮಿಕ ಕ್ರಾಂತಿ ಮುಂತಾದ ವಿಷಯಗಳನ್ನೇ ಭಾಷಣಗಳಲ್ಲಿ ಪ್ರತಿಪಾದಿಸುತ್ತಿದ್ದ ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ಹಠಾತ್ತನೆ ಸಂಘಪರಿವಾದ ಕಾರ್ಯಕರ್ತನಾಗಿ ಬದಲಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಇದರ ಬೆನ್ನಲ್ಲೆ ಪವನ್ ಕಲ್ಯಾಣ್ ಈ ಹಿಂದೆ ಕ್ರಿಶ್ಚಿಯನ್ ಸಮುದಾಯದ ಸಭೆಯೊಂದರಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಆಡಿದ್ದ ಮಾತುಗಳ ವಿಡಿಯೋ ಒಂದು ವೈರಲ್ ಆಗಿದ್ದು, ಹಿಂದೂ ಧರ್ಮದ ಬಗ್ಗೆ ಮಾತನಾಡಲು ಪವನ್ ಕಲ್ಯಾಣ್ ಗೆ ಅಧಿಕಾರವೇ ಇಲ್ಲವೆಂಬ ಒಕ್ಕಣೆಯೊಂದಿಗೆ ಆ ವಿಡಿಯೋ ವೈರಲ್ ಆಗುತ್ತಿದೆ.


ತಿರುಪತಿ ಲಡ್ಡು ವಿಚಾರ ಹೊರಬಿದ್ದ ಬಳಿಕ ನಾವು ಹಿಂದೂಗಳು ತೀವ್ರ ನೋವಿನಲ್ಲಿದ್ದೇವೆ. ನಮ್ಮ ನೋವನ್ನು ಅಪಹಾಸ್ಯ ಮಾಡಬೇಡಿ. ಜಾತ್ಯತೀತರೆಂದು ಹೇಳಿಕೊಳ್ಳುವ ಕೆಲವರು ತಿರುಪತಿ ಲಡ್ಡು ಬಗ್ಗೆ, ಗಣೇಶನ ಬಗ್ಗೆ, ಸರಸ್ವತಿ ಬಗ್ಗೆ ಅಯ್ಯಪ್ಪ ಮಾಲೆ ಧರಿಸುವವರ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ನೀವು ಏಸು ಬಗ್ಗೆ ಜೋಕ್ ಮಾಡಬಲ್ಲಿರಾ? ಇಸ್ಲಾಂ ಧರ್ಮದ ಬಗ್ಗೆ ಪ್ರವಾದಿ ಮೊಹಮ್ಮದ್ ಬಗ್ಗೆ ಜೋಕ್ ಮಾಡಬಲ್ಲಿರಾ? ಏಕೆ ಮಾಡುವುದಿಲ್ಲ? ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದರು. ಸನಾತನ ಧರ್ಮದ ಬಗ್ಗೆ ಮಾತನಾಡುವಾಗ ಸಾವಿರ ಬಾರಿ ಯೋಚಿಸಿ’ ಎಂದಿದ್ದರು.

ಇದಾದ ಬಳಿಕ ಪವನ್ ಕಲ್ಯಾಣ್ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ‘ನಾನು ಸಹ ಚರ್ಚ್ ಗಳಿಗೆ ಭೇಟಿ ಕೊಟ್ಟಿದ್ದೇನೆ, ನನಗೆ ಬ್ಯಾಪ್ಟಿಸ್ಟ್ (ಕ್ರಿಶ್ಚಿಯನ್ನರ ಮತಾಂತರ ವಿಧಾನ) ಮಾಡಿದ್ದಾರೆ. ಹೆಚ್ಚು ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ನಾನು ಇಸ್ರೇಲ್ ಗೆ ಹೋಗಿದ್ದೆ. ಅಲ್ಲಿ ಜೀಸಸ್ ಜನನ ಸ್ಥಳವಾದ ಬೆತ್ಲೇಹೇಮ್ ಗೆ ಭೇಟಿ ನೀಡಿದ್ದೆ. ಕ್ರಿಶ್ಚಿಯಾನಿಟಿ ಎಂಬುದು ಬಹಳ ದೊಡ್ಡ ಧರ್ಮ. ಎಲ್ಲೆಲ್ಲಿಂದಲೋ ಅಷ್ಟು ದೂರ ಬಂದು ಜನ ಭೇಟಿ ನೀಡುತ್ತಿರುವುದು ಆಶ್ಚರ್ಯ ತರಿಸಿತು. ಈ ಧರ್ಮದಲ್ಲಿರುವ ಸೇವಾ ತತ್ಪರತೆಯಿಂದಲೇ ಅದು ಸಾಧ್ಯವಾಗಿದೆ. ಆ ಭಗವಂತನ ಆಜ್ಞೆ ಇಂದ, ಸೇವಾತತ್ಪರತೆಯಿಂದಲೇ ಇಷ್ಟು ಜನ ಈ ಧರ್ಮವನ್ನು ತಮ್ಮದಾಗಿಸಿಕೊಂಡಿದ್ದಾರೆ’ ಎಂದಿದ್ದಾರೆ ಪವನ್ ಕಲ್ಯಾಣ್.


‘ಹಾಗಾಗಿ ನಿಮಗೆ ಯಾವುದೇ ಸಮಸ್ಯೆ ಎದುರಾದಾಗ ನಾನು ನಿಮಗೆ ಬೆಂಬಲವಾಗಿ ನಿಲ್ಲುತ್ತೀನಿ. ಮನೆಯಲ್ಲಿ ಸಹ ನನ್ನ ಇಬ್ಬರು ಮಕ್ಕಳು ಸಾಂಪ್ರದಾಯಿಕ ಕ್ರಿಶ್ಚಿಯನ್ನರು (ಆರ್ಥೋಡಾಕ್ಸ್ ಕ್ರಿಶ್ಚಿಯನ್). ಇಂದು ಇಲ್ಲಿ ಬಂದಿದ್ದೀನಿ ಎಂದಲ್ಲ, ಮೊದಲಿನಿಂದಲೂ ಈ ವಿಷಯವನ್ನು ನಾನು ಹೇಳುತ್ತಲೇ ಬಂದಿದ್ದೀನಿ’ ಎಂದು ಆ ವಿಡಿಯೋನಲ್ಲಿ ಪವನ್ ಕಲ್ಯಾಣ್ ಎಲ್ಲರೆದುರು ಹೇಳಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಕ್ರಿಶ್ಚಿಯನ್ ಧರ್ಮ ಆಚರಣೆ ಮಾಡುತ್ತಿರುವ ಪವನ್ ಕಲ್ಯಾಣ್ ಹೀಗ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅವರು ‘ನಿಜವಾದ ಹಿಂದೂ ಅಲ್ಲ’ ಎಂದು ಲೇಬಲ್ ಮಾಡುವ ಕಾಮೆಂಟ್ ಗಳು ಗೋಚರಿಸುತ್ತಿವೆ.

Join Whatsapp
Exit mobile version