Home ಟಾಪ್ ಸುದ್ದಿಗಳು ಪ್ರಚೋದನಾತ್ಮಕ ಹೇಳಿಕೆ: ಮುತಾಲಿಕ್ ಗಡಿಪಾರಿಗೆ ಒತ್ತಾಯ

ಪ್ರಚೋದನಾತ್ಮಕ ಹೇಳಿಕೆ: ಮುತಾಲಿಕ್ ಗಡಿಪಾರಿಗೆ ಒತ್ತಾಯ

ಬೆಂಗಳೂರು: ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಪ್ರಮೋದ್ ಮುತಾಲಿಕ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಒತ್ತಾಯಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ನಿರುದ್ಯೋಗ ಸಮಸ್ಯೆಯಿಂದ ಯುವ ಪೀಳಿಗೆ ಕಂಗಾಲಾಗಿದೆ. ಸಮಾಜದಲ್ಲಿ ಬಡತನ ಎಲ್ಲೆ ಮೀರಿದೆ. ವಸತಿ, ರಸ್ತೆ, ವಿದ್ಯುತ್, ನೀರು ಸೇರಿ ಹಲವು ಸಮಸ್ಯೆಗಳು ಜನರನ್ನು ಬೆಂಬಿಡದೇ ಕಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿ ಅರಾಜಕತೆ ತಾಂಡವವಾಡುತ್ತಿದೆ. ಈ ಬಗ್ಗೆ ಚರ್ಚೆ ಮಾಡದೇ ಕೇವಲ ಪ್ರಚೋದನಕಾರಿ ಹೇಳಿಕೆ ನೀಡಿ, ಯುವಕರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿರುವ ಮುತಾಲಿಕ್ ಜವಾಬ್ದಾರಿ ಇಲ್ಲದ ನಾಡದ್ರೋಹಿ ಎಂದು ಹುಸೇನ್ ಕಿಡಿ ಕಾರಿದರು.


ಸಮಾಜದ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿರುವ ಪ್ರಮೋದ್ ಮುತಾಲಿಕ್ ನನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

Join Whatsapp
Exit mobile version