Home ಟಾಪ್ ಸುದ್ದಿಗಳು ಮುತಾಲಿಕ್ ಸುಪ್ರಭಾತ ಅಭಿಯಾನದಿಂದ ಬಿತ್ತು ಯಕ್ಷಗಾನಕ್ಕೆ ಕುತ್ತು: ಅನ್ನಪಾತ್ರೆಗೆ ಕನ್ನ ಹಾಕಿದ ರಾಮಸೇನೆಗೆ ಹಿಡಿಶಾಪ ಹಾಕಿದ...

ಮುತಾಲಿಕ್ ಸುಪ್ರಭಾತ ಅಭಿಯಾನದಿಂದ ಬಿತ್ತು ಯಕ್ಷಗಾನಕ್ಕೆ ಕುತ್ತು: ಅನ್ನಪಾತ್ರೆಗೆ ಕನ್ನ ಹಾಕಿದ ರಾಮಸೇನೆಗೆ ಹಿಡಿಶಾಪ ಹಾಕಿದ ಕಲಾವಿದರು

►”ಮುಸ್ಲಿಮರ ಒಂದು ಕಣ್ಣು ಒಡೆಯಲು ಹೋಗಿ ನಮ್ಮ ಎರಡು ಕಣ್ಣು ಒಡೆದು ಹಾಕಿದ್ದಾರೆ” ಎಂದ ಕರಾವಳಿಗರು

ಬೆಂಗಳೂರು: ರಾಜ್ಯಾದ್ಯಂತ ಹೊಸ ಗೊಂದಲ ಉಂಟುಮಾಡಿದ ಮುತಾಲಿಕ್ ಅವರ ಸುಪ್ರಭಾತ ಅಭಿಯಾನದ ಪರಿಣಾಮ ಸರಕಾರ ಕೈಗೊಂಡಿರುವ ಧ್ವನಿ ವರ್ಧಕ ನಿರ್ಬಂಧ ತೀರ್ಮಾನಕ್ಕೆ ಕರಾವಳಿಯ ಯಕ್ಷಗಾನ ಕಲಾವಿದರು ಕಂಗೆಟ್ಟು ಹೋಗಿದ್ದು ಮುತಾಲಿಕ್ ಮತ್ತವನ ಸಂಗಡಿಗರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕರಾವಳಿಯ ಪ್ರಮುಖ ಕಲೆಯಾದ ಯಕ್ಷಗಾನ ಮತ್ತು ಧಾರ್ಮಿಕ ಆಚಾರಗಳಾದ ಕೋಲ, ನೇಮಗಳು ಅತ್ಯಧಿಕವಾಗಿ ರಾತ್ರಿವೇಳೆಯಲ್ಲೇ ಪ್ರಾರಂಭವಾಗುವುದು ಮತ್ತು ಅದು ಬೆಳಗ್ಗಿನ ಜಾವದವರೆಗೂ ಮುಂದುವರಿಯುತ್ತದೆ. ಆದರೆ ಮುತಾಲಿಕ್ ಮತ್ತು ಅವರ ಸಂಗಡಿಗರು ರಾಜ್ಯಾದ್ಯಂತ ಆಝಾನ್ ವಿರುದ್ಧ ಎಬ್ಬಿಸಿದ ಅಭಿಯಾನಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾತ್ರಿ 10 ರಿಂದ  ಬೆಳಗ್ಗೆ 6ರ ತನಕ ಯಾವುದೇ ಧ್ವನಿವರ್ಧಕಗಳ ಬಳಕೆ ಮಾಡಬಾರದು ಎಂದು ತೀರ್ಮಾನ ಕೈಗೊಂಡಿದ್ದು ಇದೀಗ  ಆ ನಿರ್ಧಾರ ಕರವಾಳಿಯ ಯಕ್ಷಗಾನ ಕಲಾವಿದರಿಗೆ ಬಹುದೊಡ್ಡ ಆಘಾತ ತಂದೊಡ್ಡಿದೆ.

ಈ ಕುರಿತಂತೆ ಸಾಮಾಜಿಕ ವಲಯಗಳಲ್ಲಿ ಮುತಾಲಿಕ್ ಹಾಗೂ ರಾಮಸೇನೆ ವಿರುದ್ಧ ಯಕ್ಷಗಾನ ಸೇರಿದಂತೆ ಎಲ್ಲಾ ವಿಧದ ಕಲಾವಿದರು ಆಕ್ರೋಶಗೊಂಡಿದ್ದು “ಮುಸ್ಲಿಮರ ಒಂದು ಕಣ್ಣು ಒಡೆಯಲು ಹೋಗಿ ನಮ್ಮ ಎರಡು ಕಣ್ಣು ಒಡೆದು ಹಾಕಿದ್ದಾರೆ” ಎಂದು ಹರಿಹಾಯ್ದಿದ್ದಾರೆ.

ಅವರು ಹಿಜಾಬ್ ಬಿಚ್ಚಿಸಲು ಹೋಗಿ ನಮ್ಮನ್ನು ಬೆತ್ತಲೆ ತಿರುಗುವಂತೆ ಮಾಡಿದ್ದಾರೆ, ಮುಸ್ಲಿಮರ ಮೈಕ್ ಕಿತ್ತು ಹಾಕಲು ಹೋಗಿ ನಮ್ಮ ಅನ್ನಕ್ಕೆ ಕಲ್ಲು ಹಾಕಿದ್ದಾರೆ, ಮೈಕ್ ಇಲ್ಲದಿದ್ದರೆ ಮುಸ್ಲಿಮರಿಗೆ ಎಳ್ಳಷ್ಟೂ ನಷ್ಟವಿಲ್ಲ, ತೊಂದರೆ ಎಲ್ಲವೂ ನಮಗೆ ಮಾತ್ರ , ಇದೀಗ ಸುಪ್ರೀಂಕೋರ್ಟ್ ತೀರ್ಪು ಜಾರಿಗೊಳಿಸಲು ಮುಂದಾದ ಸರ್ಕಾರದ ನಿರ್ಧಾರದಿಂದ ಕರಾವಳಿ ಕಲಾವಿದರಿಗೆ ದೊಡ್ಡ ಕೊಡಲಿಯೇಟು ನೀಡಿದೆ, ರಾಮಸೇನೆಯವರು ಧರ್ಮ ರಕ್ಷಕರಲ್ಲ, ಧರ್ಮ ಭಕ್ಷಕರು ಎಂದೆಲ್ಲಾ ಮುತಾಲಿಕ್ ಮತ್ತವರ ಸೇನೆಗೆ ಉಗಿದಿದ್ದಾರೆ.

ದಿನದಿಂದ ದಿನಕ್ಕೆ ಮುಸ್ಲಿಮರ ವಿರುದ್ಧ ಹುಚ್ಚುಹುಚ್ಚಾದ ಅಭಿಯಾನ ಹುಟ್ಟುಹಾಕುತ್ತಿರುವ ಮುತಾಲಿಕ್ ಮತ್ತವರ ಸಂಗಡಿಗರ ಲೆಕ್ಕಾಚಾರ ತಲೆಕೆಳಗಾಗಿದ್ದು, ಸ್ವಧರ್ಮದವರನ್ನೇ ಸಂಕಷ್ಟದಲ್ಲಿ ಸಿಲುಕಿಸಿ ಅವರಿಂದ ಉಗಿಸಿಕೊಳ್ಳುವ ದುಸ್ಥಿತಿಗೆ ಬಂದು ತಲುಪಿಸಿದೆ.

Join Whatsapp
Exit mobile version