ನವದೆಹಲಿ: ತ್ರಿಪುರಾ ಹಿಂಸಾಚಾರದ ಕುರಿತು ಮಂಗಳವಾರ ಸುಪ್ರೀಮ್ ಕೋರ್ಟ್ ನ ವಕೀಲರು ಮತ್ತು ಮಾನವಹಕ್ಕು ಸಂಘಟನೆಯ ಒಕ್ಕೂಟ ಸತ್ಯಶೋಧನ ವರದಿವೊಂದು ಬಿಡುಗಡೆಗೊಳಿಸಿದ್ದು, 51 ಕಡೆಗಳಲ್ಲಿ ಮುಸ್ಲಿಮರ ಮೇಲೆ ಗಂಭೀರ ಹಲ್ಲೆ ಮತ್ತು 12 ಮಸೀದಿಗಳನ್ನು ಧ್ವಂಸಗೊಳಿಸಿದೆ ಎಂಬ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.
ಬಿಜೆಪಿ ಸರ್ಕಾರ ತ್ರಿಪುರಾ ಮುಸ್ಲಿಮರ ಮೇಲಿನ ಪೂರ್ವಯೋಜಿತ ಹಿಂಸಾಚಾರವನ್ನು ತಡೆಯುವ ಬದಲು ಹಿಂದುತ್ವ ಗಲಭೆಕೋರರನ್ನು ಪ್ರಚೋದಿಸಿದೆ ಎಂದು ಸತ್ಯಶೋಧನ ತಂಡ ಆರೋಪಿಸಿದೆ.
“ತ್ರಿಪುರಾದಲ್ಲಿ ಮಾನವೀಯತೆಯ ದಾಳಿ, ಮುಸ್ಲಿಮ್ ಜೀವಕ್ಕೆ ಸಂಬಂಧಿಸಿದೆ” ಎಂಬ ಶೀರ್ಷಿಕೆಯಲ್ಲಿ ತಯಾರಿಸಿದ ಸತ್ಯಶೋಧನಾ ವರದಿಯನ್ನು ತಂಡದ ಸದಸ್ಯರು ನವದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಬಿಡುಗಡೆಗೊಳಿಸಿದರು.
ದೇಶಭಕ್ತಿಯ ಸೋಗಿನಲ್ಲಿ ರಾಜ್ಯದೆಲ್ಲೆಡೆ ಹಿಂಸೆಯನ್ನು ಹರಿಯಬಿಡಲಾಗಿದ್ದು, ಬಿಜೆಪಿಯ ರಾಜಕೀಯ ಹಿತಾಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಹಿಂಸಾಚಾರನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅದು ಪ್ರತಿಪಾದಿಸಿದೆ.
ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ನಡೆದ ಗಲಭೆಯನ್ನು ಮುಂದಿಟ್ಟುಕೊಂಡು ತ್ರಿಪುರಾದ ಪಾಣಿಸಾಗರದಲ್ಲಿ 12 ಮಸೀದಿ ಧ್ವಂಸ, 51 ಕಡೆಗಳಲ್ಲಿ ಮುಸ್ಲಿಮರ ಮೇಲೆ ದಾಳಿ, ಸಿ.ಆರ್.ಪಿ.ಎಫ್ ಪಡೆಯಿಂದ ಹಿಂಸಾಚಾರ, ಕುರಾನ್ ಗೆ ಬೆಂಕಿ ಹಚ್ಚುವಿಕೆ ಸೇರಿದಂತೆ ವ್ಯಾಪಕ ಹಿಂಸಾಚಾರವನ್ನು ನಡೆಸಲಾಗಿದೆ ಎಂದು ಸ್ಥಳೀಯ ನಿವಾಸಿ ಮುನಾವರ್ ಅಲಿ ಸತ್ಯಶೋಧನ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ಸತ್ಯಶೋಧನಾ ತಂಡದಲ್ಲಿ ಸುಪ್ರೀಮ್ ಕೋರ್ಟ್ ನ ವಕೀಲರಾದ ಇಹ್ತಿಶಾಮ್ ಹಶ್ಮಿ, ಅಮಿತ್ ಶ್ರೀವಾಸ್ತವ್ (ಸಮನ್ವಯ ಸಮಿತಿ, ಪ್ರಜಾಪ್ರಭುತ್ವಕ್ಕಾಗಿ ವಕೀಲರು), ಅನ್ಸಾರ್ ಇಂದೋರಿ (ಕಾರ್ಯದರ್ಶಿ NCHRO) ಮುಖೇಶ್ (ಪಿ.ಯು.ಸಿ.ಎಲ್, ದೆಹಲಿ) ಇದ್ದರು.