ಮುಸ್ಲಿಮರು ಸಮಾನತೆಯನ್ನು ಬಯಸುತ್ತಾರೆ, ಪ್ರಾಬಲ್ಯವನ್ನಲ್ಲ : ಭಾಗವತ್ ಹೇಳಿಕೆಗೆ ತಿರುಗೇಟು ನೀಡಿದ ಜಿಯಾವುದ್ದೀನ್ ನಯ್ಯರ್

Prasthutha|

ಹೈದರಾಬಾದ್: ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ದೇಶದ ಎಲ್ಲಾ ಪ್ರಜೆಗಳ ಪೂರ್ವಜರು ಒಂದೇ ಹಿನ್ನೆಲೆವುಳ್ಳವರು ಮತ್ತು ಇಸ್ಲಾಂ ಈ ದೇಶದಲ್ಲಿ ಆಕ್ರಮಣಕಾರರ ಮೂಲಕ ಬೆಳೆದು ಬಂದಿದೆ ಎಂಬ ಸತ್ಯವನ್ನು ಪ್ರಸ್ತುತಪಡಿಸಲಿ ಎಂದು ಹೇಳಿದ್ದರು. ಮಾತ್ರವಲ್ಲದೆ ಮುಸ್ಲಿಂ ಸಮುದಾಯದ ಪ್ರಜ್ಞಾವಂತ ನಾಯಕರಿಗೆ ಮೂಲಭೂತವಾದವನ್ನು ಬಹಿರಂಗಪಡಿಸಲು ಮತ್ತು ಧಾರ್ಮಿಕ ಉಗ್ರವಾದವನ್ನು ವಿರೋಧಿಸಲು ಭಾಗವತ್ ಮನವಿ ಮಾಡಿದ್ದರು.

- Advertisement -

ಭಾಗವತ್ ಅವರ ಹೇಳಿಕೆ ಪ್ರತಿಕ್ರಿಯಿಸಿದ AIMTM ಅಧ್ಯಕ್ಷ ಜಿಯಾವುದ್ದೀನ್ ನಯ್ಯರ್ ಅವರು ಮುಂಬೈನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ. ಮಾತ್ರವಲ್ಲದೆ ಮುಸ್ಲಿಮರ ಕುರಿತು ಭಾಗವತ್ ಅವರು ಇತ್ತೀಚಿಗೆ ಭಾರತದಲ್ಲಿ ಉಳಿದಿರುವ ಪ್ರತಿಯೊಬ್ಬರೂ ಹಿಂದುಗಳೆಂಬ ಹೇಳಿಕೆಯಲ್ಲಿ ಸ್ಪಷ್ಟತೆಯಿಲ್ಲ ಎಂದು ಜಿಯಾವುದ್ದೀನ್ ನಯ್ಯರ್ ತಿಳಿಸಿದ್ದಾರೆ. ಭಾರತದಲ್ಲಿ ನೆಲೆಸಿರುವ ಎಲ್ಲರ ಪೂರ್ವಜರು ಒಂದೇ ಹಿನ್ನೆಲೆಯವರು ಎಂಬ ಭಾಗವತ್ ಅವರ ಹೇಳಿಕೆಯನ್ನು ಒಪ್ಪಲಾಗದು ಎಂದು ಅವರು ತಿಳಿಸಿದರು.

135 ಕೋಟಿ ಜನಸಂಖ್ಯೆಯು ಹಿಂದೂಗಳಾಗಿದ್ದರೆ, ದೇಶದ ಜನಗಣತಿಯಲ್ಲಿ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿಗಳೆಂದು ಯಾಕೆ ತೋರಿಸಲಾಗಿದೆ. ಪ್ರತಿಯೊಬ್ಬರೂ ಹಿಂದುವಾಗಿದ್ದರೆ ರಾಷ್ಟ್ರೀಯತೆಯ ಕಾಲಂನಲ್ಲಿ ಭಾರತೀಯನ ಸ್ಥಾನದಲ್ಲಿ ಹಿಂದು ಎಂದು ನಮೂದಿಸಬೇಕಿತ್ತು. ಅದೇ ರೀತಿ ಜಾತಿ ಕಾಲಂ ನಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಸಿಖ್, ಕ್ರಿಶ್ಚಿಯನ್, ಪಾರ್ಸಿ ಅಥವಾ ಮುಸ್ಲಿಮ್ ಎಂದು ನಮೂದಿಸಬೇಕಿತ್ತು.

- Advertisement -

ಆರೆಸ್ಸೆಸ್ ಹಿಂದೂ ಮತ್ತು ಭಾರತೀಯರ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಲಿ. ಮೋಹನ್ ಭಾಗವತ್ ಅವರಿಗೆ ಮುಸ್ಲಿಮರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ ದೇಶದ ಮುಸ್ಲಿಮರ ಮೇಲೆ ಬ್ರಾಹ್ಮಣ್ಯ ವರ್ಗದಿಂದ ನಡೆಯುತ್ತಿರುವ ನಿರಂತರ ಕಿರುಕುಳ, ಬೆದರಿಕೆ, ಗುಂಪು ಹಿಂಸೆ, ಸಾಮಾಜಿಕ ಬಹಿಷ್ಕಾರವನ್ನು ನಿಲ್ಲಿಸಲು ಯೋಜನೆ ರೂಪಿಸಲಿ ಎಂದು ನಯ್ಯರ್ ಅವರು ಕುಟುಕಿದರು. ಭಾರತದ ಮುಸ್ಲಿಮರು ತಮ್ಮ ಗುರುತನ್ನು ಉಳಿಸಿಕೊಳ್ಳಲು, ಗೌರವಾನ್ವಿತ ಜೀವನ ನಡೆಸಲು, ತಮ್ಮ ಜೀವನೋಪಾಯವನ್ನು ಗಳಿಸಲು ಶ್ರಮಿಸುತ್ತಿದ್ದಾರೆ ಎಂದು ತಮೀರ್ ಮಿಲ್ಲತ್ ಅಧ್ಯಕ್ಷರು ಹೇಳಿದರು.



Join Whatsapp