Home ಟಾಪ್ ಸುದ್ದಿಗಳು ಮಥುರಾ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡಿ: ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರಪ್ರದೇಶ ಸಚಿವ

ಮಥುರಾ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡಿ: ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರಪ್ರದೇಶ ಸಚಿವ

ಲಕ್ನೋ: ಮಥುರಾದ ಕೃಷ್ಣನ ದೇವಾಲಯದ ಸಮೀಪವಿರುವ ಐತಿಹಾಸಿಕ ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸಲು ಮುಸ್ಲಿಮರು ಸಜ್ಜಾಗಲಿ ಎಂಬ ಉತ್ತರಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ತಿಳಿಸಿದ್ದಾರೆ.

ಮಥುರಾ ಮಸೀದಿಯ ಕುರಿತು ವಿವಾದಾತ್ಮಕ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ ಶುಕ್ಲಾ, ಅಯೋಧ್ಯೆ ವಿವಾದವನ್ನು ನ್ಯಾಯಾಲಯ ಬಗೆಹರಿಸಿದಾಗ ಈ ದೇಶದ ಹಿಂದೂಗಳು ಸಂಭ್ರಮಿಸಿದ್ದರು. ಸದ್ಯ ವಾರಣಾಸಿ ಮತ್ತು ಮಥುರಾದಲ್ಲಿನ ಶ್ವೇತ ಸಂರಚನೆಯ ದೇವಾಲಯಗಳಿಗಾಗಿ ದೇಶದ ಹಿಂದೂಗಳು ಕಾತುರದಿಂದ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ನ್ಯಾಯಾಲಯದ ನೆರವಿನಿಂದ ಮಥುರಾ ದೇವಾಲಯಗಳನ್ನು ಪಡೆಯಲು ಪ್ರತಿ ಹಿಂದೂಗಳು ಕಾಯುತ್ತಿರುವುದು ನೋವಿನ ಸಂಗತಿ ಎಂದು ರಾಜ್ಯ ಸಂಸದೀಯ ವ್ಯವಹಾರ ಸಚಿವ ಶುಕ್ಲಾ ಸುದ್ದಿಗಾರರಿಗೆ ತಿಳಿಸಿದರು.

ರಾಮ, ಕೃಷ್ಣ ಮತ್ತು ಶಿವನ ದೇವಾಲಯಗಳನ್ನು ಕೆಡವಿ ಮುಸ್ಲಿಮ್ ದೊರೆಗಳು ಮಸೀದಿ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕೃಷ್ಣನ ದೇವಾಲಯದ ಸಮೀಪವಿರುವ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡಲು ಮುಸ್ಲಿಮರು ಸಜ್ಜಾಗಲಿ ಎಂದು ಅವರು ತಿಳಿಸಿದರು.

ಡಿಸೆಂಬರ್ 6, 1992 ರಂದು ಕರಸೇವಕರು ಕೆಡವಿ ಹಾಕಿದ ಬಾಬರಿ ಮಸೀದಿ ಜಾಗದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ.

ಮಾತ್ರವಲ್ಲ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಸೈಯದ್ ವಾಸೀಮ್ ರಿಝ್ವಿ ಹಿಂದೂ ಧರ್ಮಕ್ಕೆ ಮತಾಂತರವಾದಂತೆ ಪ್ರತಿ ಮುಸ್ಲಿಮರು ಘರ್ ವಾಪಸಿ ಆಗಲು ತಯಾರಾಗಲಿ ಎಂಬ ಹೇಳಿಕೆ ನೀಡಿ ತನ್ನ ನಾಲಗೆಯನ್ನು ಹರಿಯ ಬಿಟ್ಟಿದ್ದಾರೆ.

ಈ ಹಿಂದೆ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ಮಥುರಾದಲ್ಲಿ ನೂತನ ದೇವಸ್ಥಾನಕ್ಕೆ ಬೆಂಬಲ ನೀಡಿದ್ದರು.

Join Whatsapp
Exit mobile version