Home ಟಾಪ್ ಸುದ್ದಿಗಳು ಮಸೀದಿಗಳನ್ನು ಕೆಡವಿ ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಯಾರೂ ಭಾವಿಸಬೇಡಿ: ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್

ಮಸೀದಿಗಳನ್ನು ಕೆಡವಿ ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಯಾರೂ ಭಾವಿಸಬೇಡಿ: ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್

`ಮುಸ್ಲಿಮರು ಹೇಡಿಗಳಲ್ಲ, ಮುಸ್ಲಿಮರು ಕ್ಷಮಾಗುಣ ಉಳ್ಳವರು’

ಕಲ್ಲಿಕೋಟೆ: ಒಂದೊಂದೇ ಮಸೀದಿಗಳನ್ನು ಕೆಡವಿದರೆ ಮುಸ್ಲಿಮರು ಪ್ರಚೋದನೆಗೊಂಡು ಗಲಭೆ ಮಾಡುತ್ತಾರೆ ಎಂದು ಯಾರೂ ಭಾವಿಸಬೇಡಿ, ಮುಸ್ಲಿಮರನ್ನು ಭ್ರಮನಿರಸನಗೊಳಿಸಿ ತಪ್ಪು ಕೆಲಸಗಳಿಗೆ ಪ್ರಚೋದಿಸಬಹುದು ಎಂದು ಯಾರೂ ಭಾವಿಸಬೇಡಿ ಎಂದು ಆಲ್ ಇಂಡಿಯಾ ಸುನ್ನಿ ಜಮಿಯತುಲ್ ಉಲೇಮಾ ನೇತಾರರೂ ಆಗಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.


ಕೇರಳದ ಕಲ್ಲಿಕೋಟೆಯ ಮರ್ಕಝ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಶಾಂತಿ ಸೃಷ್ಟಿಸುವುದನ್ನು ಮುಸ್ಲಿಮರು ಅನುಮತಿಸುವುದಿಲ್ಲ, ಪ್ರಚೋದನೆಗೊಂಡು ನಾವು ಯಾವುದೇ ಕೃತ್ಯಗಳನ್ನು ನಡೆಸುವುದಿಲ್ಲ, ಹಾಗಂತ ಅದರ ಅರ್ಥ ಮುಸ್ಲಿಮರನ್ನು ಹೇಡಿಗಳು ಎಂದಲ್ಲ, ಮುಸ್ಲಿಮರು ಕ್ಷಮಾಗುಣ ಉಳ್ಳುವರು, ಪ್ರಧಾನ ಮಂತ್ರಿ ಮತ್ತು ಎಲ್ಲಾ ಮಂತ್ರಿಗಳಿಗೆ ನಾವು ಈ ವಿಚಾರವನ್ನು ಹೇಳುತ್ತಿದ್ದೇವೆ ಎಂದು ಅವರು ನುಡಿದರು.


ನಾವು ನಾಲಿಗೆಯಲ್ಲಿ ಜಿಹಾದ್ ಮಾಡುತ್ತಿವೆಯೋ ಹೊರತು ಖಡ್ಗದಿಂದ ಜಿಹಾದ್ ಮಾಡುವುದಿಲ್ಲ, ಮತ್ತೊಂದು ಧರ್ಮಕ್ಕೆ ನಾವು ತಡೆ ಮಾಡುವ ಕೆಲಸ ಮಾಡುವುದಿಲ್ಲ. ಇಸ್ಲಾಂ ಸ್ವಾತಂತ್ರ್ಯವುಳ್ಳ ಧರ್ಮ, ಇಸ್ಲಾಮಿನಲ್ಲಿ ಕೋಮುವಾದಕ್ಕೆ ಅವಕಾಶ ಇಲ್ಲ, ಇಷ್ಟ ಇರುವವರು ಇಸ್ಲಾಂ ಧರ್ಮ ಸ್ವೀಕರಿಸಬಹುದು ಎಂದು ಹೇಳಿದರು. ಇಸ್ಲಾಂ ಪ್ರಕಾರ ಜೀವಿಸಿ ಮರಣ ಹೊಂದಿದರೆ ಮಾತ್ರ ಸ್ವರ್ಗ ಪ್ರಾಪ್ತಿಯಾಗಲಿದೆ ಎಂದು ನಾವು ವಿಶ್ವಾಸ ಇಟ್ಟಿದ್ದೇವೆ ಎಂದರು.

Join Whatsapp
Exit mobile version