ಮುಸ್ಲಿಮರ ಕೈಹಿಡಿಯಲು ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ: ರೆಹಮಾನ್ ಖಾನ್

Prasthutha|

ಬೆಂಗಳೂರು: ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಮುಸ್ಲಿಮರ ಕೈ ಹಿಡಿಯಲು ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದ್ದಾರೆ.

- Advertisement -


ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ರೆಹಮಾನ್ ಖಾನ್, ನಮ್ಮದು ಜ್ಯಾತ್ಯಾತೀತ ದೇಶ. ಕಾಂಗ್ರೆಸ್ ಜ್ಯಾತ್ಯಾತೀತ ಪಕ್ಷವಾದುದರಿಂದ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಜೊತೆ ಇದೆ.ನಾಳೆ ಬಿಜೆಪಿ ಜ್ಯಾತ್ಯಾತೀತವಾದರೆ ಮುಸ್ಲಿಮರು ಬಿಜೆಪಿ ಜೊತೆ ಕೂಡ ಇರುತ್ತಾರೆ. ಮುಸ್ಲಿಮರ ಕೈಹಿಡಿಯೋದಕ್ಕೆ ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ. ಅವರಿಗೆ ಸಂವಿಧಾನ ಒಂದೇ ಸಾಕು‌ ಎಂದು ಹೇಳಿದ್ದಾರೆ.

ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಭಾರತ ದೇಶದಲ್ಲಿ 22 ಕೋಟಿ ಮುಸ್ಲಿಮರು ಇರುವಾಗ ಅಲ್ಪಸಂಖ್ಯಾತರಾಗಲು ಸಾಧ್ಯವಿಲ್ಲ ಎಂದು ರೆಹಮಾನ್ ಖಾನ್ ಸ್ಪಷ್ಟಪಡಿಸಿದರು.

Join Whatsapp
Exit mobile version