ಕುಟುಂಬಿಕರಿಂದ ನಿರಾಕರಿಸಲ್ಪಟ್ಟ ಕೋವಿಡ್ ಪೀಡಿತ ಹಿಂದೂ ಯುವಕನ ಮೃತದೇಹ | ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

Prasthutha|

ಹೈದರಾಬಾದ್: ಕೋವಿಡ್‌ನಿಂದ ಮೃತಪಟ್ಟು ಕುಟುಂಬಿಕರಿಂದ ನಿರಾಕರಿಸಲ್ಪಟ್ಟ ಹಿಂದೂ ಯುವಕನೊಬ್ಬನ ಅಂತ್ಯ ಸಂಸ್ಕಾರವನ್ನು ಇಬ್ಬರು ಮುಸ್ಲಿಂ ಯುವಕರು ನೆರವೇರಿಸಿದ ಘಟನೆ ತೆಲಂಗಾಣದ ಪೆಡ್ಡಾ ಕೊಡಪಗಲ್ ಕ್ಷೇತ್ರದ ಕಡಪಲ್ಲಿ ಗ್ರಾಮದಲ್ಲಿ ನಡೆದಿದೆ.

- Advertisement -

 ಕೊವಿಡ್ ಸೋಂಕಿನಿಂದ ಸಾವುಗಳ ಹೆಚ್ಚಳದಿಂದಾಗಿ ಸ್ಮಶಾನಗಳು ತುಂಬಿ ತುಳುಕುತ್ತಿರುವುದರಿಂದ ಮೊಗುಲಿಯಾ ಎಂಬ ಹಿಂದೂ ಯುವಕನ ಮೃತದೇಹವನ್ನು ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ಕುಟುಂಬಿಕರು ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರು ಮುಸ್ಲಿಂ ಯುವಕರು ಜಾತಿ ಭೇದ ಮರೆತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಮೊಗುಲಿಯಾ ಎಂಬ ಯುವಕನಿಗೆ ಕೋವಿಡ್ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬನ್ಸುವಾಡಾದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ವೈರಸ್ ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ಕುಟುಂಬ ಸದಸ್ಯರು ಮೊಗುಲಿಯಾ ಅವರ ಮೃತದೇಹವನ್ನು ಅಂತ್ಯಸಂಸ್ಕಾರ ನಡೆಸಲು ಸಿದ್ಧರಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಫಿ ಮತ್ತು ಅಲಿ ಎಂಬ ಇಬ್ಬರು ಮುಸ್ಲಿಂ ಯುವಕರು ಮೊಗುಲಿಯಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Join Whatsapp