ಬರ್ತ್ ಡೇ ಪಾರ್ಟಿಗೆ ನುಗ್ಗಿ ಮುಸ್ಲಿಮ್ ಯುವಕರ ಮೇಲೆ ಹಲ್ಲೆ ನಡೆಸಿದ ಬಜರಂಗದಳದ ಕಾರ್ಯಕರ್ತರು

Prasthutha|

►ಆರೋಪಿಗಳಿಗೆ ರಕ್ಷಣೆ ನೀಡಿ ಸಂತ್ರಸ್ತರನ್ನೇ ಬಂಧಿಸಿದ ಪೊಲೀಸರು

- Advertisement -

ಇಂದೋರ್: ಬರ್ತ್ ಡೇ ಪಾರ್ಟಿಗೆ ನುಗ್ಗಿ ಬಜರಂಗದಳದ ಕಾರ್ಯಕರ್ತರು ಮುಸ್ಲಿಮ್ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಘಟನೆಯ ವೀಡಿಯೋ ವ್ಯಾಪಕ ವೈರಲಾಗಿದೆ.


ಹಿಂದೂ ಯುವತಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿ ಮುಸ್ಲಿಮ್ ಯುವಕರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.
ಮುಸ್ಲಿಂ ಯುವಕರ ಮೇಲೆ ‘ಲವ್ ಜಿಹಾದ್’ ಆರೋಪ ಮಾಡಿರುವ ದುಷ್ಕರ್ಮಿಗಳು, ನಂತರ ಇಂದೋರ್’ನ ಎಂಐಜಿ ಕಾಲೋನಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

- Advertisement -


ದಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ಸಂತ್ರಸ್ತರನ್ನೇ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Join Whatsapp
Exit mobile version