Home ಟಾಪ್ ಸುದ್ದಿಗಳು ಮುಸ್ಲಿಂ ಯುವಕನ ಕಸ್ಟಡಿ ಸಾವು: ಮೂವರು ಪೊಲೀಸರ ವಿರುದ್ಧ ಕೊಲೆ ಆರೋಪ ದಾಖಲಿಸಲು ಹೈಕೋರ್ಟ್ ಆದೇಶ

ಮುಸ್ಲಿಂ ಯುವಕನ ಕಸ್ಟಡಿ ಸಾವು: ಮೂವರು ಪೊಲೀಸರ ವಿರುದ್ಧ ಕೊಲೆ ಆರೋಪ ದಾಖಲಿಸಲು ಹೈಕೋರ್ಟ್ ಆದೇಶ

ಮುಂಬೈ: 2009ರಲ್ಲಿ ಮುಂಬೈಯ ಘಾಟ್ ಕೋಪರ್ ಪೊಲೀಸ್ ಠಾಣೆಯಲ್ಲಿ 22ರ ಹರೆಯದ ಯುವಕ ಅಲ್ತಾಫ್ ಕಾದಿರ್ ಶೇಖ್ ಸಾವಿಗೀಡಾದ ಸಂಬಂಧ ಮೂವರು ಪೊಲೀಸರ ವಿರುದ್ಧ ಕೊಲೆ ಆರೋಪದಡಿ ಚಾರ್ಜ್ ಶೀಟ್ ಸಲ್ಲಿಸುವಂತೆ ಮುಂಬೈ ಉಚ್ಚ ನ್ಯಾಯಾಲಯವು ಅವಕಾಶ ಮಾಡಿಕೊಟ್ಟಿದೆ.


ಭಾರತೀಯ ದಂಡ ಸಂಹಿತೆಯ ಕೊಲೆ ಸಂಬಂಧಿ 302ನೇ ಸೆಕ್ಷನ್ ನಡಿ ಮೂವರು ಆರೋಪಿ ಪೊಲೀಸರ ವಿರುದ್ಧ ಚಾರ್ಜ್ ಶೀಟಿಗೆ ಹೈಕೋರ್ಟ್ ಸೂಚಿಸಿದೆ.
ಏಪ್ರಿಲ್ 24ರಂದು ಮೂವರು ಆರೋಪಿ ಪೊಲೀಸರು ಟ್ರಯಲ್ ಕೋರ್ಟಿನೆದುರು ಹಾಜರಾಗಬೇಕು ಮತ್ತು ಇನ್ನು ಒಂದು ವರ್ಷದೊಳಗೆ ಈ ಪ್ರಕರಣ ಮುಕ್ತಾಯಗೊಳಿಸಬೇಕು ಎಂದು ಸಹ ಮುಂಬಯಿ ಹೈ ಕೋರ್ಟ್ ಹೇಳಿದೆ.


2009ರ ಸೆಪ್ಟೆಂಬರ್ 11ರಂದು ಅಲ್ತಾಫ್ ಕಾದಿರ್ ಶೇಖ್ ಪೊಲೀಸ್ ಠಾಣೆಯಲ್ಲಿ ಕಸ್ಟಡಿ ಸಾವಿಗೀಡಾಗಿದ್ದ. ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯದ ಮೇಲೆ ಅಲ್ತಾಫ್ ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಠಾಣೆಗೆ ಬಂದ ಒಂದೇ ಗಂಟೆಯಲ್ಲಿ ಆತ ಪೊಲೀಸರ ಕೈಯಲ್ಲಿ ಸಾವನ್ನಪ್ಪಿದ್ದ.
ಆಗ ಘಾಟ್ ಕೋಪರ್ ಪೊಲೀಸ್ ಠಾಣೆಯಲ್ಲಿ ಇದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂಜಯ್ ಖೇಡೆಕರ್, ಮುಖ್ಯ ಪೇದೆ ರಘುನಾಥ ಕೋಲೆಕರ್, ಪೊಲೀಸ್ ಪೇದೆ ಸಯ್ಯಾಜಿ ತೋಂಬ್ರೆ ವಿರುದ್ಧ ಪ್ರಕರಣ ದಾಖಲಾಗಿತ್ತು.

Join Whatsapp
Exit mobile version